News Karnataka Kannada
Monday, April 29 2024
ವಿದೇಶ

ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ: ತಾಲಿಬಾನ್‌ ಸರ್ಕಾರ ಆದೇಶ

shutting down of beauty salons
Photo Credit : IANS

ಕಾಬೂಲ್‌: ಈ ಹಿಂದೆ ಮಹಿಳೆಯರು ಮನರಂಜನಾ ಸ್ಥಳಗಳಿಗೆ ಹೋಗುವುದನ್ನ ನಿಷೇಧಿಸಿದ್ದ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಸರ್ಕಾರ ಇದೀಗ ಕಾಬೂಲ್‌ ಸೇರಿದಂತೆ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸುವಂತೆ ಆದೇಶಿಸಿದೆ.

ತಾಲಿಬಾನ್ ಸಚಿವಾಲಯದ ವಕ್ತಾರ ಮೊಹಮ್ಮದ್ ಅಕಿಫ್ ಮಹಜರ್ ಕೂಡಲೇ ಮಹಿಳೆಯರ ಬ್ಯೂಟಿ ಸಲೊನ್‌ಗಳನ್ನ ನಿಷೇಧಿಸಲು ಆದೇಶ ಹೊರಡಿಸುವಂತೆ ಕಾಬೂಲಿನ ಮುನ್ಸಿಪಾಲಿಟಿಗೆ ಸೂಚಿಸಿದ್ದಾರೆ. ಈ ನಡುವೆ ಪುರುಷರು ನಿರುದ್ಯೋಗಿಗಳಾಗಿದ್ದಾರೆ, ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಹಿಳೆಯರು ಒಂದೊತ್ತಿನ ಊಟಕ್ಕಾಗಿ ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಮಾಡಲು ಹೋಗ್ತಿದ್ದಾರೆ. ಅದನ್ನೂ ನಿಷೇಧಿಸಿದ್ರೆ ನಾವೇನು ಮಾಡಬೇಕು? ಎಂದು ಮೇಕಪ್‌ ಕಲಾವಿದ  ರೈಹಾನ್ ಮುಬಾರಿಜ್ ಪ್ರಶ್ನಿಸಿದ್ದಾರೆ.

ಈ ಹಿಂದೆ ಮುಸ್ಲಿಂ ಹುಡುಗಿಯರು ಹಾಗೂ ಯುವತಿಯರು ಶಾಲೆ-ಕಾಲೇಜುಗಳಿಗೆ ಹೋಗುವುದು, ಎನ್‌ಜಿಒಗಳಲ್ಲಿ ಕೆಲಸ ಮಾಡುವುದನ್ನ ತಾಲಿಬಾನ್‌ ಸರ್ಕಾರ ನಿಷೇಧಿಸಿತ್ತು. ಆ ನಂತರ ಚಿತ್ರಮಂದಿರ ಮತ್ತು ಇತರ ಮನರಂಜನಾ ಪ್ರದೇಶಗಳಿಗೆ ಹೋಗುವುದಕ್ಕೂ ಬ್ರೇಕ್‌ ಹಾಕಿದೆ.  1996 ಮತ್ತು 2001 ರ ನಡುವೆ ತಾಲಿಬಾನ್ ಅಧಿಕಾರದಲ್ಲಿದ್ದಾಗ, ಉಗ್ರಗಾಮಿ ಗುಂಪು ವಿಧಿಸಿದ ವ್ಯಾಪಕ ಕ್ರಮಗಳ ಭಾಗವಾಗಿ ಬ್ಯೂಟಿ ಸಲೂನ್ಗಳನ್ನು ಮುಚ್ಚಲಾಯಿತು. ಆದಾಗ್ಯೂ, 2001 ರ ಯುಎಸ್ ನೇತೃತ್ವದ ಅಫ್ಘಾನಿಸ್ತಾನದ ಆಕ್ರಮಣದ ನಂತರದ ವರ್ಷಗಳಲ್ಲಿ ವ್ಯವಹಾರಗಳು ಮತ್ತೆ ತೆರೆಯಲ್ಪಟ್ಟವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು