ಸನಾ: ಯೆಮನ್ ರಾಜಧಾನಿ ಸನಾದಿಂದ ಪಶ್ಚಿಮಕ್ಕೆ ಸುಮಾರು 111 ಕಿಮೀ ದೂರದಲ್ಲಿರುವ ಅಲ್ ಮಾಹ್ವಿತ್ ಗವರ್ನರೇಟ್ನಲ್ಲಿ ನೀರಿನ ಅಣೆಕಟ್ಟು ಕುಸಿದು ಯೆಮೆನ್ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಅಲ್ ಮಾಹ್ವಿತ್ ಗವರ್ನರೇಟ್ನ ಹಫಾಶ್ ಜಿಲ್ಲೆಯ ಅಲ್-ಅಕಾಬಿ ಅಣೆಕಟ್ಟು ಕುಸಿದಿದೆ ಎಂದು ಸ್ಥಳೀಯ ಅಧಿಕಾರಿಗಳು ಭಾನುವಾರ ದೃಢಪಡಿಸಿದ್ದಾರೆ. ಇದರಿಂದ ಮಸೀದಿಯೊಂದು ಮುಳುಗಿದ್ದು ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದ ಸಮೀಪದ ಮನೆಗಳಿಗೂ ಹಾನಿಯಾಗಿದೆ. ಗವರ್ನರೇಟ್ 2014 ರಿಂದ ಹೌತಿ ಗುಂಪಿನ ನಿಯಂತ್ರಣದಲ್ಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಣೆಕಟ್ಟಿನ ಕುಸಿತಕ್ಕೆ ಭಾರೀ ಮಳೆ ಹರಿವು ಕಾರಣವಾಗಿದೆ. ಅಧಿಕಾರಿಗಳು ಎರಡು ರಕ್ಷಣಾ ಮತ್ತು ಆಂಬ್ಯುಲೆನ್ಸ್ ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.