ಪ್ಯಾರಿಸ್: ಪಶ್ಚಿಮ ಫ್ರಾನ್ಸ್ನಲ್ಲಿ ಶುಕ್ರವಾರ ಸಂಜೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಫ್ರೆಂಚ್ ಕೇಂದ್ರ ಭೂಕಂಪನ ಬ್ಯೂರೋ (ಎಫ್ಸಿಎಸ್ಬಿ) ಪ್ರಕಟಿಸಿದೆ.
ಭೂಕಂಪದ ಕೇಂದ್ರಬಿಂದುವು ಪಶ್ಚಿಮ ಫ್ರಾನ್ಸ್ನ ಡ್ಯೂಕ್ಸ್-ಸೆವ್ರೆಸ್ ವಿಭಾಗದಲ್ಲಿ ನಿಯೋರ್ಟ್ ನಗರದ ನೈಋತ್ಯಕ್ಕೆ 28 ಕಿಲೋಮೀಟರ್ನಲ್ಲಿತ್ತು ಎಂದು ಎಫ್ಸಿಎಸ್ಬಿಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನೆರೆಯ ಚಾರೆಂಟೆ-ಮೆರಿಟೈಮ್ ಪ್ರಿಫೆಕ್ಚರ್ನಲ್ಲಿ ಕಟ್ಟಡಗಳ ಮೇಲೆ ಬಿರುಕು ಕಾಣಿಸಿಕೊಂಡಿದ್ದು, ಆದರೆ ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ. “1,100 ಮನೆಗಳಿಗೆ ಪ್ರಸ್ತುತ ವಿದ್ಯುತ್ ಕಡಿತಗೊಂಡಿದೆ ಎಂದು ವರದಿ ಹೇಳಿದೆ.