News Karnataka Kannada
Thursday, May 02 2024
ವಿದೇಶ

ಇಂಡೋನೇಷ್ಯಾ ಪಪುವಾ ಪ್ರಾಂತ್ಯದಲ್ಲಿ ಭೂಕಂಪನಕ್ಕೆ ಕನಿಷ್ಠ 4 ಬಲಿ

Five injured in building collapse in France
Photo Credit : Pixabay

ಜಕಾರ್ತ: ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಗುರುವಾರ ಸಂಭವಿಸಿದ 5.4 ತೀವ್ರತೆಯ ಭೂಕಂಪನದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದು, ಹಲವಾರು ಮನೆ ಮತ್ತು ಕಟ್ಟಡಗಳು ನಾಶವಾಗಿವೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದಿಂದ ಮನೆಗಳು, ರೆಸ್ಟೋರೆಂಟ್ ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಭೂಕಂಪದ ಸಮಯದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದ ಮೌಲ್ಯಮಾಪನವನ್ನು ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದೇಶದ ಹವಾಮಾನ, ಹವಾಮಾನ ಇಲಾಖೆ ಪ್ರಕಾರ ಭೂಕಂಪವು ಗುರುವಾರ ಮಧ್ಯಾಹ್ನ 1.28 ಕ್ಕೆ ಸಂಭವಿಸಿದೆ. ಇದರ ಕೇಂದ್ರಬಿಂದುವು ಪ್ರಾಂತೀಯ ರಾಜಧಾನಿ ಜಯಪುರದ ನೈಋತ್ಯಕ್ಕೆ 1 ಕಿಲೋಮೀಟರ್‌ ದೂರದಲ್ಲಿದ್ದು, 10 ಕಿಲೋಮೀಟರ್‌ ದೂರದಲ್ಲಿ ಕಂಪನ ಸಂಭವಿಸಿದೆ. ಮುಖ್ಯ ಕಂಪನದ ನಂತರ ಹಲವಾರು  ಕಂಪನಗಳು ಆ ಪ್ರದೇಶದಲ್ಲಿ ಘಟಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು