ಇಸ್ಲಾಮಾಬಾದ್ : ಸಂಸತ್ತಿನ ಕೆಳಮನೆಯ ಅವಧಿ ಮುಗಿಯುವ ಮೂರು ದಿನಗಳ ಮೊದಲು ಆಗಸ್ಟ್ 9 ರಂದು ರಾಷ್ಟ್ರೀಯ ಅಸೆಂಬ್ಲಿಯನ್ನ ವಿಸರ್ಜಿಸಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಆಡಳಿತಾರೂಢ ಮಿತ್ರಪಕ್ಷಗಳ ಗೌರವಾರ್ಥವಾಗಿ ಪ್ರಧಾನಿ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಔತಣಕೂಟದಲ್ಲಿ ಷರೀಫ್ ಈ ವಿಷಯ ತಿಳಿಸಿದರು ಎಂದು ಡಾನ್ ಪತ್ರಿಕೆ ಇಂದು ವರದಿ ಮಾಡಿದೆ.
ಆಡಳಿತಾರೂಢ ಸಮ್ಮಿಶ್ರ ಸರ್ಕಾರವು ಆಗಸ್ಟ್ 12ರಂದು ಸಂಸತ್ತಿನ ಐದು ವರ್ಷಗಳ ಅವಧಿಯನ್ನ ಪೂರ್ಣಗೊಳಿಸಿದ ನಂತ್ರ ಚುನಾವಣೆಯನ್ನ ಎದುರಿಸಲು ಸಜ್ಜಾಗುತ್ತಿದೆ.
ಇನ್ನು ರಾಷ್ಟ್ರೀಯ ಅಸೆಂಬ್ಲಿ ತನ್ನ ಅಧಿಕಾರಾವಧಿಯನ್ನ ಪೂರ್ಣಗೊಳಿಸಿದ್ರೆ, 60 ದಿನಗಳಲ್ಲಿ ಚುನಾವಣೆಗಳನ್ನ ನಡೆಸಬೇಕು. ಆದ್ರೆ, ಅಕಾಲಿಕ ವಿಸರ್ಜನೆಯ ಸಂದರ್ಭದಲ್ಲಿ ಈ ಅವಧಿಯನ್ನ 90 ದಿನಗಳವರೆಗೆ ವಿಸ್ತರಿಸಲಾಗುತ್ತದೆ.