ನವದೆಹಲಿ: ಭೂಮಿಯಿಂದ ಚಂದ್ರನತ್ತ ಹಾರಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಉತ್ತಮವಾಗಿದೆ ಎಂದು ಇಸ್ರೋ ಹೇಳಿದೆ.
ಈ ಸಂಬಂಧ ಶನಿವಾರ ಟ್ವೀಟ್ ಮಾಡಿರುವ ಇಸ್ರೋ, ಶುಕ್ರವಾರ ಚಂದ್ರನೆಡೆ ತೆರಳಿರುವ ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ. ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ನಲ್ಲಿ ಚಂದ್ರಯಾನ-3 ಗಗನನೌಕೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಬಾಹ್ಯಾಕಾಶ ನೌಕೆಯು ಈಗ 41,762 ಕಿ.ಮೀ x 173 ಕಿ.ಮೀ ಕಕ್ಷೆಯಲ್ಲಿದೆ ಎಂದು ಮಾಹಿತಿ ನೀಡಿದೆ.
ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಶುಭಶುಕ್ರವಾರದಂದು ಜಿಎಸ್ಎಲ್ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಿಂದ ಉಪಗ್ರಹವು ಮಧ್ಯಾಹ್ನ 2.35ಕ್ಕೆ ನಭಕ್ಕೆ ಚಿಮ್ಮಿತ್ತು. ಗಗನನೌಕೆಯು ಭೂಮಿಯಿಂದ ಚಂದ್ರನೆಡೆಗೆ ತಲುಪಲು ಸುಮಾರು 40 ದಿನ ತೆಗೆದುಕೊಳ್ಳುತ್ತದೆ. ಆಗಸ್ಟ್ 23 ರಂದು ಚಂದ್ರನಲ್ಲಿ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ.
Chandrayaan-3 Mission update:
The spacecraft's health is normal.The first orbit-raising maneuver (Earthbound firing-1) is successfully performed at ISTRAC/ISRO, Bengaluru.
Spacecraft is now in 41762 km x 173 km orbit. pic.twitter.com/4gCcRfmYb4
— ISRO (@isro) July 15, 2023