News Karnataka Kannada
Monday, April 29 2024
ವಿದೇಶ

592 ಕೋಟಿ ರೂ ಮೌಲ್ಯದ ಬ್ರಿಟನ್‌ನ ಐಶಾರಾಮಿ ನಿವಾಸ ಭಾರತೀಯ ಉದ್ಯಮಿ ಪಾಲು

luxury hotel stoke
Photo Credit :

ಭಾರತದ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ, ಶ್ರೀಮಂತ ಭಾರತವನ್ನು ಆಳಿದ ಬ್ರಿಟೀಷ್ ರಾಜಮನೆತನದ ಐಶಾರಾಮಿ ಆಸ್ತಿ, ಬ್ರಿಟನ್‌ನ ಮೊದಲ ಕಂಟ್ರಿ ಕ್ಲಬ್ ಅನ್ನು ಖರೀದಿ ಮಾಡಿದ್ದಾರೆ. ಬಕಿಂಗ್‌ಹ್ಯಾಮ್‌ ಶೈರ್ ಮೂಲದ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್‌ನ ಮಾಲೀಕರಾಗಿದ್ದಾರೆ.

ಉದ್ಯಮಿ ಅಂಬಾನಿ ಅವರು ಬಕಿಂಗ್‌ಹ್ಯಾಮ್‌ ಶೈರ್ ಮೂಲದ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್‌ನ ಮಾಲೀಕರಾಗಿದ್ದಾರೆ, ಇದರ ಮೌಲ್ಯ 592 ಕೋಟಿ ರೂ.

ಮುಖೇಶ್ ಅಂಬಾನಿ ಅವರು ಇತ್ತೀಚೆಗೆ ಐಷಾರಾಮಿ ಆಸ್ತಿಗಳನ್ನು ನಿರ್ವಹಣೆ ಮಾಡಲು ಉದ್ಯಮಿ ವಿಕ್ರಮ್ ಒಬೆರಾಯ್ ಅವರೊಂದಿಗೆ ಪಾಲುದಾರರಾಗಿದ್ದಾರೆ. ಈ ದುಬಾರಿ ಕಂಟ್ರಿ ಕ್ಲಬ್‌ನಲ್ಲಿ 300 ಎಕರೆಗಳಷ್ಟು ವಿಸ್ತಾರದಲ್ಲಿದ್ದು ಇಲ್ಲಿ ಐಶಾರಾಮಿ ಪರಿಕರಗಳು, ಸುಂದರವಾದ ಉದ್ಯಾನಗಳು, ಮ್ಯೂಸಿಯಂ ಮತ್ತು ಸರೋವರಗಳಿವೆ.

ಇಲ್ಲಿ ಸಿಗುವ ಸೌಕರ್ಯಗಳ ಕಾರಣದಿಂದಾಗಿ, ಮುಖೇಶ್ ಅಂಬಾನಿಯವರ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್ ಯುರೋಪ್‌ನಾದ್ಯಂತ ಅತ್ಯಂತ ಪ್ರಸಿದ್ಧ ಮತ್ತು ವಿಶೇಷವಾದ ಹೋಟೆಲ್‌ಗಳಲ್ಲಿ ಒಂದಾಗಿದೆ.

ಬ್ರಿಟನ್‌ನಲ್ಲಿರುವ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್ ಹಲವಾರು ವರ್ಷಗಳಿಂದ ಹಲವಾರು ಪ್ರಸಿದ್ಧ ಸಂದರ್ಶಕರು ಮತ್ತು ಅತಿಥಿಗಳನ್ನು ಕಂಡಿದೆ. ಬ್ರಿಟನ್ ರಾಜಮನೆತನದ ಸದಸ್ಯರು ಸಹ ತಮ್ಮ ಮಹತ್ವದ ಆಚರಣೆಗಳು ಮತ್ತು ಸಂದರ್ಭಗಳಿಗಾಗಿ ಶ್ರೀಮಂತ ಮನೆಯಲ್ಲಿ ಉಳಿಯುತ್ತಿದ್ದರು. ರಾಣಿ ಎಲಿಜಬೆತ್ I ಈ ಹಿಂದೆ 1581 ರಲ್ಲಿ ಈ ಸ್ಥಳದಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು