News Karnataka Kannada
Friday, May 03 2024
ವಿದೇಶ

ಮಾಸ್ಕೋ: ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸಿದ್ದ ಪಾಪ್ ಗಾಯಕ ನಿಗೂಢ ಸಾವು

Pop singer who criticised Vladimir Putin dies under mysterious circumstances
Photo Credit : IANS

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡುಗಳ ಬರೆದು ಹಾಡಿದ್ದ 35 ವರ್ಷದ ಪಾಪ್ ತಾರೆ ಡಿಮಾ ನೋವಾ ನಿಗೂಢ ಸಾವಿಗೀಡಾಗಿದ್ದಾರೆ.

ರಷ್ಯಾದ ಪಾಪ್ ತಾರೆ ದಿಮಾ ನೋವಾ ಹಠಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ನ್ಯೂಸ್‌ವೀಕ್ ಪ್ರಕಾರ, ಡಿಮಾ ಪಾಪ್ ಗುಂಪಿನ ಸಂಸ್ಥಾಪಕರಾಗಿದ್ದರು, ಅವರ ಹಾಡುಗಳು ರಷ್ಯಾದಲ್ಲಿ ಯುದ್ಧ-ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಜನಪ್ರಿಯವಾಗಿದ್ದವು.

ಕ್ರೀಮ್ ಸೋಡಾ ಗುಂಪಿನ ಸಂಸ್ಥಾಪಕರಾದ ಡಿಮಾ ನೋವಾ ತಮ್ಮ ಹಾಡಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 1.3 ಬಿಲಿಯನ್ ಡಾಲರ್ ಅರಮನೆಯವನ್ನು ಟೀಕಿಸಿದ್ದಾರೆ. ಇದೇ “ಆಕ್ವಾ ಡಿಸ್ಕೋ” ಹಾಡಿನಲ್ಲಿ ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಿ ಆಗಾಗ್ಗೆ ಪ್ರದರ್ಶನ ನೀಡುತ್ತಿದ್ದರು. ಇದಕ್ಕೆ “ಆಕ್ವಾ ಡಿಸ್ಕೋ ಪಾರ್ಟಿ” ಎಂದೇ ಕರೆಯಲಾಗುತ್ತಿತ್ತು. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಲು ಆಗಾಗ್ಗೆ ಈ ಹಾಡನ್ನು ಹಾಡಲಾಗುತ್ತಿತ್ತು.

ನೀರಿನಲ್ಲಿ ಮುಳುಗಿ ಸಾವು: ಯಾರೋಸ್ಲಾವ್ಲ್ ಪ್ರದೇಶದಲ್ಲಿ ರಷ್ಯಾದ ವೋಲ್ಗಾ ನದಿಯನ್ನು ದಾಟುವಾಗ ಡಿಮಾ ನೋವಾ ಹಿಮ ನದಿಯಲ್ಲಿ ಬಿದ್ದಿದ್ದಾರೆ ಎಂದು ರಷ್ಯಾದ ಸುದ್ದಿ ವೆಬ್‌ಸೈಟ್ ಪೀಪಲ್‌ಟಾಕ್ ವರದಿ ಮಾಡಿದೆ. ಅಪಘಾತದ ಸಮಯದಲ್ಲಿ ಅವರ ಸಹೋದರ ರೋಮಾ ಮತ್ತು ಇಬ್ಬರು ಸ್ನೇಹಿತರು ಜೊತೆಗಿದ್ದರು ಎಂದು ಹೇಳಲಾಗಿದ್ದು, ಪಾಪ್ ಗ್ರೂಪ್ ಕ್ರೀಮ್ ಸೋಡಾ ಇನ್‌ಸ್ಟಾಗ್ರಾಮ್‌ನಲ್ಲಿ ಡಿಮಾ ನೋವಾ ಅವರ ಮರಣವನ್ನು ಪ್ರಕಟಿಸುವ ಪೋಸ್ಟ್ ಅನ್ನು ಹಂಚಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು