News Karnataka Kannada
Monday, April 29 2024
ವಿದೇಶ

ಪತನಗೊಂಡ ಲೂನಾ 25: ರಷ್ಯಾದ ಚಂದ್ರಯಾನ ಕನಸು ಭಗ್ನ

Luna 25: Russia's moon mission shattered
Photo Credit : IANS

ಮಾಸ್ಕೊ: ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ 25 ಚಂದ್ರನ ಮೇಲೆ ಇಳಿಯುವ ವೇಳೆ ಪತನಗೊಂಡಿದೆ. (ಕ್ರಾಶ್‌ ಲ್ಯಾಂಡೆಡ್‌). ನಾಳೆ ಆಗಸ್ಟ್‌ 21ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಯಲಿದೆ ಎಂದು ಈ ಹಿಂದೆ ರಷ್ಯಾ ಬಾಹ್ಯಾಕಾಶ ಸಂಸ್ಥೆ ತಿಳಿಸಿತ್ತು. ಇದೀಗ ನೌಕೆ ಬಾಹ್ಯಾಕಾಶ ಕೇಂದ್ರದೊಂದಿಗೆ ಸಂಪರ್ಕ ಕಡಿತಗೊಂಡಿರುವುದು ದೃಢಪಟ್ಟಿದೆ.

ನೌಕೆಯನ್ನು ಹುಡುಕಲು ಮತ್ತು ಅದರೊಂದಿಗೆ ಸಂಪರ್ಕ ಸಾಧಿಸಲು ಆಗಸ್ಟ್ 19 ಮತ್ತು 20 ರಂದು ತೆಗೆದುಕೊಂಡ ಕ್ರಮಗಳು ಯಾವುದೇ ಧನಾತ್ಮಕ ಫಲಿತಾಂಶ ನೀಡಿಲ್ಲ. ನೌಕೆಯು ಆಫ್-ಡಿಸೈನ್ ಕಕ್ಷೆಗೆ ಬದಲಾಗಿದ್ದು, ಚಂದ್ರನ ಮೇಲ್ಮೈಯೊಂದಿಗೆ ಘರ್ಷಣೆಯ ಪರಿಣಾಮವಾಗಿ ಪತನಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಮಾರು ಐದು ದಶಕಗಳ ನಂತರ ರಷ್ಯಾ ಚಂದ್ರಯಾನ ಕೈಗೊಂಡಿದ್ದು, ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಸಿದ್ಧತೆ ಮಾಡಿಕೊಂಡಿತ್ತು. ಲೂನಾ-25 ಅನ್ನು ಆಗಸ್ಟ್ 10 ರಂದು ಉಡಾವಣೆ ಮಾಡಲಾಗಿತ್ತು. ಆಗಸ್ಟ್ 16 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಇದು ಭಾರತದ ಚಂದ್ರಯಾನ 3 ನೌಕೆ ಚಂದ್ರನಲ್ಲಿ ಇಳಿಯುವ ಮೊದಲು ಅಂದರೆ ಸೋಮವಾರ (ಆಗಸ್ಟ್‌ 21) ಇಳಿಸಲು ರಷ್ಯಾ ಸಿದ್ಧತೆ ನಡೆಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು