News Karnataka Kannada
Wednesday, April 17 2024
Cricket
ವಿದೇಶ

ನಾಪತ್ತೆಯಾಗಿದ್ದ ಹೆಲಿಕಾಪ್ಟರ್‌ ಪತನ: ಐವರು ಸಾವು

Five killed as missing helicopter crashes
Photo Credit : Pixabay

ಕಠ್ಮಂಡು: ಸೋಲುಖುಂಬು ಜಿಲ್ಲೆಯಿಂದ ಕಠ್ಮಂಡುವಿಗೆ  ತೆರಳುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಐವರು ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದಾನೆ ಎಂದು ನೇಪಾಳ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮನಾಂಗ್ ಏರ್ ಹೆಲಿಕಾಪ್ಟರ್ ಲಿಖುಪಿಕೆ ಗ್ರಾಮಾಂತರ ಪುರಸಭೆಯ ಲಾಮ್ಜುರಾ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶವು ಮೌಂಟ್ ಎವರೆಸ್ಟ್ ಬಳಿ ಜಿರಿ ಮತ್ತು ಫಾಪ್ಲು ನಡುವೆ ಇದೆ. ಅಪಘಾತದ ಸ್ಥಳದಲ್ಲಿರುವ ಕಿರಿಯ ಪೊಲೀಸ್ ಅಧಿಕಾರಿ ನಿರಂಜನ್ ಬಾಸ್ನೆಟ್ ದುರ್ಘಟನೆ ಬಗ್ಗೆ ವಿವರ ನೀಡಿದ್ದು, ಐದು ಮೃತದೇಹಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಆರನೇ ವ್ಯಕ್ತಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮನಾಂಗ್ ಏರ್‌ನ ಕಾರ್ಯಾಚರಣೆ ವ್ಯವಸ್ಥಾಪಕ ರಾಜು ನ್ಯೂಪಾನೆ, ವಿಮಾನದಲ್ಲಿದ್ದ ಆರು ಜನರಲ್ಲಿ ಕ್ಯಾಪ್ಟನ್ ಚೇತ್ ಬಹದ್ದೂರ್ ಗುರುಂಗ್, ಮತ್ತು ಐವರು ಮೆಕ್ಸಿಕನ್ ಪ್ರಜೆಗಳು ಇದ್ದರು ಎಂದು ತಿಳಿಸಿದಾರೆ. ಲಿಖುಪಿಕೆ ಪುರಸಭೆಯ ಉಪಾಧ್ಯಕ್ಷ ನ್ವಾಂಗ್ ಲಕ್ಪಾ ಶೆರ್ಪಾ ಅವರ ಪ್ರಕಾರ, ಸ್ಥಳೀಯರು ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ಪತ್ತೆ ಮಾಡಿದ್ದಾರೆ.

ಹೆಲಿಕಾಪ್ಟರ್ ಮೂಲತಃ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಬಳಿಯ ಲುಕ್ಲಾಗೆ ತೆರಳುತ್ತಿತ್ತು ಆದರೆ ಕೆಟ್ಟ ಹವಾಮಾನದಿಂದಾಗಿ ಲ್ಯಾಂಡ್ ಆಗಲು ಸಾಧ್ಯವಾಗಿರಲಿಲ್ಲ. ನಂತರ ಹೆಲಿಕಾಪ್ಟರ್ ಸೋಲುಖುಂಬು ಸುರ್ಕೆಯಲ್ಲಿ ಇಳಿದು, ನಂತರ ಅದು ಕಠ್ಮಂಡುವಿಗೆ ತೆರಳುತ್ತಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು