News Karnataka Kannada
Sunday, May 12 2024
ವಿದೇಶ

ಲಾಗೋಸ್: ನೈಜೀರಿಯಾದಲ್ಲಿ ಡಕಾಯಿತರ ಗುಂಡಿಗೆ ಕನಿಷ್ಠ 46 ನಾಗರಿಕರು ಬಲಿ

At least 46 civilians killed in Nigeria shooting by dacoits
Photo Credit : IANS

ಲಾಗೋಸ್: ನೈಜೀರಿಯಾದ ಕೇಂದ್ರ ರಾಜ್ಯವಾದ ಬೆನ್ಯೂದಲ್ಲಿ ಸಮುದಾಯವೊಂದರ ಮೇಲೆ ಶಸ್ತ್ರಸಜ್ಜಿತ ಡಕಾಯಿತರು ನಡೆಸಿದ ದಾಳಿಯಲ್ಲಿ ಕನಿಷ್ಠ 46 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಉಮೊಗಿಡಿ ಸಮುದಾಯದಲ್ಲಿ ಮಂಗಳವಾರ ಮತ್ತು ಬುಧವಾರದ ನಡುವೆ ಸಂಭವಿಸಿದ ದಾಳಿಯಲ್ಲಿ ನೂರಾರು ನಿವಾಸಿಗಳು ಗಾಯಗೊಂಡಿದ್ದು, ಹಲವರು ತಮ್ಮ ಮನೆಗಳಿಂದ ಓಡಿಹೋದರು ಎಂದು ಒಟುಕ್ಪೊ ಸ್ಥಳೀಯ ಸರ್ಕಾರಿ ಪ್ರದೇಶದ ಅಧ್ಯಕ್ಷ ಬಾಕೊ ಎಜೆ ಖಚಿತಪಡಿಸಿದ್ದಾರೆ.

ಅವರ ಪ್ರಕಾರ, ದಾಳಿಕೋರರು ಬುಧವಾರ ಸಂಜೆ 4:15 ರ ಸುಮಾರಿಗೆ ಮನಬಂದಂತೆ ಗುಂಡು ಹಾರಿಸಿ 46 ಜನರನ್ನು ಕೊಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ರಾಜ್ಯಪಾಲರ ಭದ್ರತೆಯ ವಿಶೇಷ ಸಲಹೆಗಾರ ಪಾಲ್ ಹೆಂಬಾ ಕೂಡ ಇತ್ತೀಚಿನ ದಾಳಿಯನ್ನು ದೃಢಪಡಿಸಿದ್ದಾರೆ. ಅಲ್ಲದೇ ಹಲವು ಮಂದಿ ಘಟನೆ ಬಳಿಕ ಕಾಣಿಯಾಗಿದ್ದಾರೆ ಎಂದು ವಿವರಿಸಿದ್ದಾರೆ.

ನೈಜೀರಿಯಾದ ರಾಜಧಾನಿ ಅಬುಜಾದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಹಯಸಿಂತ್ ಅಲಿಯಾ, ಕೊಲೆಗಾರರನ್ನು ಹುಡುಕಲು ಭದ್ರತಾ ಏಜೆನ್ಸಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು. ನೈಜೀರಿಯಾದ ಉತ್ತರ ಮತ್ತು ಮಧ್ಯ ಪ್ರದೇಶಗಳಲ್ಲಿ ಸಶಸ್ತ್ರ ದಾಳಿಗಳು ಸಮಾನ್ಯವಾಗಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಸಾವುಗಳು ಮತ್ತು ಅಪಹರಣಗಳಿಗೆ ಕಾರಣವಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು