ಟೆಲ್ ಅವಿವ್: ಗಾಜಾ ಪಟ್ಟಿಯನ್ನು ಆಳುತ್ತಿರುವ ಹಮಾಸ್ನ ಸಂಸತ್ ಕಟ್ಟಡವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ವಶಪಡಿಸಿಕೊಂಡಿವೆ. ಸೋಮವಾರ ಹಮಾಸ್ ಸಂಸತ್ ಕಟ್ಟಡವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್ ಸೇನೆಯ ಗೋಲಾನಿ ಬ್ರಿಗೇಡ್ ತಿಳಿಸಿದ್ದಾರೆ.
ಗಾಜಾದ ಸಂಸತ್ ಕಟ್ಟಡದಲ್ಲಿ ಐಡಿಎಫ್ ಸೈನಿಕರು ಇಸ್ರೇಲಿ ಧ್ವಜವನ್ನು ಬೀಸುತ್ತಿರುವುದನ್ನು ಸಹ ಚಿತ್ರದಲ್ಲಿ ಕಾಣಬಹುದಾಗಿದೆ. ಉತ್ತರ ಗಾಜಾದಲ್ಲಿನ ಪ್ರಮುಖ ಆಸ್ಪತ್ರೆಗಳನ್ನು ಹಮಾಸ್ ತನ್ನ ಕಮಾಂಡ್ ಸೆಂಟರ್ಗಳಾಗಿ ಬಳಸುತ್ತಿದೆ ಎಂದು ಐಡಿಎಫ್ ಆರೋಪಿಸಿದೆ. ನಾಗರಿಕರನ್ನು ಎನ್ಕ್ಲೇವ್ನ ದಕ್ಷಿಣ ಭಾಗಕ್ಕೆ ಸ್ಥಳಾಂತರಿಸುವಂತೆ ಕೇಳಿಕೊಂಡಿದೆ.