News Karnataka Kannada
Monday, April 29 2024
ಮಡಿಕೇರಿ

ಕೇರಳ ಕರ್ನಾಟಕ ಗಡಿಭಾಗದಲ್ಲಿ ಪೊಲೀಸರೊಂದಿಗೆ ನಕ್ಸಲರ ಗುಂಡಿನ ಚಕಮಕಿ, ಶಸ್ತ್ರಾಸ್ತ್ರ ವಶ

Nasal's exchange fire with police on Kerala-Karnataka border, weapons seized
Photo Credit : News Kannada

ಮಡಿಕೇರಿ: ಕೆಲ ವರ್ಷಗಳಿಂದ ನಕ್ಸಲ್‌ ಹಾವಳಿ ಮತ್ತೆ ಚುರುಕಾಗಿದೆ. ಕರ್ನಾಟಕ, ಕೇರಳ ಗಡಿ ಸಮೀಪ ನಕ್ಸಲ್‌ ತಂಡ ಹಾಗೂ ನಕ್ಸಲ್‌ ನಿಗ್ರಹ ಪಡೆ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಎಲ್ಲ ನಕ್ಸಲರು ಪರಾರಿಯಾಗಿದ್ದಾರೆ.

ಇಲ್ಲಿನ ಗಡಿಗ್ರಾಮ ಕುಟ್ಟಕ್ಕೆ ಕೆಲವೇ ಕಿ.ಮೀ ದೂರದಲ್ಲಿರುವ ಕೇರಳದ ಐಯಮ್ಮುನ್ ಎಂಬ ಸ್ಥಳದಲ್ಲಿ 9 ಮಂದಿಯ ನಕ್ಸಲ್ ತಂಡವು ಶಿಬಿರ ಹಾಕಿಕೊಂಡಿತ್ತು. ಕೂಂಬಿಂಗ್ ನಡೆಸುತ್ತಿದ್ದ ನಕ್ಸಲ್ ನಿಗ್ರಹ ಪಡೆಯು ಗುಂಡಿನ ದಾಳಿ ನಡೆಸಿತು. ಪ್ರತಿಯಾಗಿ ನಕ್ಸಲರ ತಂಡವೂ ತೀವ್ರವಾದ ಗುಂಡಿನ ಚಕಮಕಿ ನಡೆಸಿದೆ. ಈ ವೇಳೆ ಎಲ್ಲರೂ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಎರಡು ರೈಫಲ್ಸ್ ಸಿಕ್ಕಿದ್ದು, ರಕ್ತದ ಕಲೆ ಪತ್ತೆಯಾಗಿವೆ. ಹೀಗಾಗಿ ಗುಂಡಿನ ಚಕಮಕಿಯಲ್ಲಿ ನಕ್ಸಲರು ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಇವರು ನಕ್ಸಲರ ಕಬಿನಿ ಎಂಬ ತಂಡದವರಾಗಿರಬಹುದು ಎಂದು ಹೆಸರು ಬಹಿರಂಗ ಪಡಿಸಲು ಬಯಸದ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು