News Karnataka Kannada
Wednesday, May 08 2024
ವಿದೇಶ

ಹಮಾಸ್‌ ಸಂಘಟನೆಯ ಮತ್ತೊಬ್ಬ ಮಾಸ್ಟರ್‌ ಮೈಂಡ್‌ ಹತ್ಯೆ

Irstbncv
Photo Credit : News Kannada

ಟೆಲ್ ಅವಿವ್: ಭಯೋತ್ಪಾದಕ ಸಂಘಟನೆ ಹಮಾಸ್‌ನ ವೈಮಾನಿಕ ಕಾರ್ಯಾಚರಣೆಗಳ ಮುಖ್ಯಸ್ಥನನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಶನಿವಾರ ಹೇಳಿದೆ.

ಹಮಾಸ್ ವೈಮಾನಿಕ ಕಾರ್ಯಾಚರಣೆಗಳ ಮುಖ್ಯಸ್ಥ ಅಬು ರುಕ್ಬೆ ಭಯೋತ್ಪಾದಕ ಸಂಘಟನೆಯ ಡ್ರೋನ್ ಕಾರ್ಯಾಚರಣೆಗಳು, ವೈಮಾನಿಕ ಪತ್ತೆ ವ್ಯವಸ್ಥೆಗಳು ಮತ್ತು ಹ್ಯಾಂಡ್ ಗ್ಲೈಡರ್‌ಗಳ ಮುಖ್ಯಸ್ಥನಾಗಿದ್ದ ಎಂದು ಐಡಿಎಫ್ ಮತ್ತು ಶಿನ್ ಬೆಟ್ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಹಮಾಸ್ ಭಯೋತ್ಪಾದಕರ ಗುಂಪುಗಳು ಇಸ್ರೇಲ್ ನೆಲದಲ್ಲಿ ಉಗ್ರ ಕೃತ್ಯ ನಡೆಸಲು ಅಬು ರುಕ್ಬೆ ಮಾಸ್ಟರ್‌ ಮೈಂಡ್‌ ಎಂದು ಇಸ್ರೇಲ್‌ ಹೇಳಿದೆ. ಇಸ್ರೇಲಿ ನೆಲದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಯೋಜನೆಗೆ ಕಾರಣರಾದ ಎಲ್ಲರನ್ನು ಇಸ್ರೇಲಿ ಪಡೆಗಳು ಬೇಟೆಯಾಡಲಿವೆ ಎಂದು ಇಸ್ರೇಲ್ ಸ್ಪೈ ಏಜೆನ್ಸಿ ಮೊಸಾದ್‌ನ ಮೇಜರ್ ಜನರಲ್ (ನಿವೃತ್ತ) ಯೈರ್ ರವೀದ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು