News Karnataka Kannada
Wednesday, May 01 2024
ವಿದೇಶ

ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೇಲೆ ಐಸಿಸ್ ಉಗ್ರರಿಂದ ದಾಳಿ

Isis militants attack tourists who were on a safari
Photo Credit : IANS

ಉಗಾಂಡ: ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸಫಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕ್ವೀನ್ ಎಲಿಜಬೆತ್ ರಾಷ್ಟ್ರೀಯ ಉದ್ಯಾನದ ಬಳಿ ಉಗ್ರರು ವಾಹನಕ್ಕೆ ಬೆಂಕಿ ಹಚ್ಚಿದ್ದರು. ವಾಹನದಲ್ಲಿದ್ದ ಮೂವರು ಸುಟ್ಟು ಕರಕಾಗಿದ್ದಾರೆ. ಇಬ್ಬರು ಪ್ರವಾಸಿಗರು ಯುಕೆ ಮತ್ತು ದಕ್ಷಿಣ ಆಫ್ರಿಕಾದಿಂದ ಬಂದಿದ್ದರೆ, ಮೂರನೇ ವ್ಯಕ್ತಿ ಸ್ಥಳೀಯ ನಿವಾಸಿಯಾಗಿದ್ದ ಅವರ ಮಾರ್ಗದರ್ಶಕರಾಗಿದ್ದರು ಎಂದು ಉಗಾಂಡಾ ವನ್ಯಜೀವಿ ಪ್ರಾಧಿಕಾರವನ್ನು ಉಲ್ಲೇಖಿಸಿ ವರದಿಯಾಗಿದೆ.

ಕ್ವೀನ್ ಎಲಿಜಬೆತ್ ನ್ಯಾಷನಲ್​ ಪಾರ್ಕ್​ನಲ್ಲಿ ಇಬ್ಬರು ವಿದೇಶಿ ಪ್ರವಾಸಿಗರು ಮತ್ತು ಉಗಾಂಡದಲ್ಲಿ ಒಬ್ಬರ ಮೇಲೆ ಭಯೋತ್ಪಾದಕರ ದಾಳಿಯನ್ನು ದಾಖಲಿಸಿದ್ದೇವೆ. ಮೂವರು ಮೃತಪಟ್ಟಿದ್ದಾರೆ ಸಫಾರಿ ವಾಹನವೂ ಬೆಂಕಿಗಾಹುತಿಯಾಗಿವೆ. ಉಗಾಂಡಾ ಪೊಲೀಸ್ ವಕ್ತಾರ ಫ್ರೆಡ್ ಎನಾಂಗಾ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು