ಟೆಹ್ರಾನ್: ಕಡ್ಡಾಯ ಹಿಜಾಬ್ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಯುವತಿಯರು ಭಾಗವಹಿಸಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಹಲವಾರು ಶಾಲಾ ಬಾಲಕಿಯರಿಗೆ ವಿಷಪ್ರಾಶನ ಮಾಡಲಾಗಿದೆ ಎಂಬ ವರದಿಗಳನ್ನು ತನಿಖೆ ನಡೆಸುತ್ತಿರುವುದಾಗಿ ಇರಾನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇರಾನ್ನ ಉಪ ಶಿಕ್ಷಣ ಸಚಿವ ಯೂನೆಸ್ ಪನಾಹಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಕೋಮ್ನಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷಪ್ರಾಶನದ ನಂತರ, ಕೆಲವು ಜನರು ಎಲ್ಲಾ ಶಾಲೆಗಳನ್ನು, ವಿಶೇಷವಾಗಿ ಬಾಲಕಿಯರ ಶಾಲೆಗಳನ್ನು ಮುಚ್ಚಬೇಕೆಂದು ಬಯಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಸಂಸತ್ತಿನ ಆರೋಗ್ಯ ಆಯೋಗದ ಸದಸ್ಯರಾದ ಡಾ ಹೋಮಯೂನ್ ಸಮೇಯಾ ನಜಾಫಬಾದಿ ಶಾಲಾ ಬಾಲಕಿಯರಿಗೆ ವಿಷಪ್ರಾಷನ ಉದ್ದೇಶಪೂರ್ವಕ ಘಟನೆ ಎಂದು ತಿಳಿಸಿದ್ದಾರೆ.
ವಿಷಪ್ರಾಶನ ಸಂತ್ರಸ್ತರ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ವೈದ್ಯರೊಬ್ಬರು “ದೇಶದ ಒಳಗೆ ಮತ್ತು ಹೊರಗೆ ಉಗ್ರಗಾಮಿ ಗುಂಪುಗಳನ್ನು (ಆಮೂಲಾಗ್ರ ಇಸ್ಲಾಮಿಸ್ಟ್ಗಳು) ಬಳಸಿಕೊಂಡು ಪ್ರತಿಭಟನಾಕಾರರನ್ನು ಹೆದರಿಸುವುದು” ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.