ಬೆಂಗಳೂರು: ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್ ನಂತರ ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದರು.
ಸದ್ಯ ತೇಜ್ ಅಭಿನಯದ ಮುಂಬರುವ ಚಿತ್ರ ‘ರಾಮಾಚಾರಿ 2.0’ ಟ್ರೈಲರ್ ಅನಾವರಣಗೊಂಡಿದೆ. ಈ ಚಿತ್ರದ ಟ್ರೈಲರ್ ಅನ್ನು ರಾಘವೇಂದ್ರ ರಾಜ್ಕುಮಾರ್ ಬಿಡುಗಡೆ ಮಾಡಿದರು.
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ನಾಯಕಿ ಚಂದನಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ‘ನನ್ನರಸಿ ರಾಧೆ’ ಧಾರಾವಾಹಿಯ ನಟಿ ಕೌಸ್ತುಭ ಮಣಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಏಪ್ರಿಲ್ 7 ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.