ಹಂಗೇರಿಯ ಬಾಲಾಟನ್ ಸರೋವರಕ್ಕೆ ಪೊಲೀಸ್ ಹೆಲಿಕಾಪ್ಟರ್ ಅಪ್ಪಳಿಸಿದ ಕ್ಷಣದ ವೀಡಿಯೊ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಕೈ ನ್ಯೂಸ್ ವರದಿಯ ಪ್ರಕಾರ, ಹಂಗೇರಿಯ ಬಾಲಾಟೊನ್ಸ್ಜೆಪ್ಲಾಕ್ನಲ್ಲಿ ಏರ್ ಪೋಲಿಸಿಂಗ್ ಸೇವೆಯ ರಿಹರ್ಸಲ್ ವೇಳೆ ಗುರುವಾರ ಈ ಘಟನೆ ಸಂಭವಿಸಿದೆ.
ರೆಡ್ಡಿಟ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸರೋವರಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದ ವಿಡಿಯೋಗಳು ಹರಿದಾಡಿವೆ. ”ಹಂಗೇರಿಯ MD-500E ಪೊಲೀಸ್ ಹೆಲಿಕಾಪ್ಟರ್ ಬಾಲಟನ್ ಸರೋವರಕ್ಕೆ ಬಿದ್ದಿದ್ದು, ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಇಬ್ಬರು ಸಿಬ್ಬಂದಿಯನ್ನು ನಂತರ ದೋಣಿಯ ಮೂಲಕ ರಕ್ಷಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.