News Karnataka Kannada
Thursday, May 02 2024
ವಿದೇಶ

ಜಿ.20 ಸಭೆ: ಬ್ರಿಟನ್‌ ಪ್ರಧಾನಿಗೆ ನವದೆಹಲಿಯಲ್ಲಿ ಅದ್ದೂರಿ ಭೋಜನಕೂಟ

G-20 meeting: UK PM to host lavish dinner in New Delhi
Photo Credit : IANS

ಲಂಡನ್: ಜಿ 20 ಶೃಂಗಸಭೆ ನವದೆಹಲಿಯಲ್ಲಿ ನಡೆಯುತ್ತಿದ್ದು, ಈ ಸಭೆಗೆ ಭಾರತೀಯ ಮೂಲದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಆಗಮಿಸಲಿದ್ದಾರೆ. ಪ್ರಧಾನಿ ಪಟ್ಟಕ್ಕೇರಿದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಸುನಕ್‌ ಆಗಮಿಸಲಿದ್ದು, ಅವರ ಪೂರ್ವಜರ ವಂಶಸ್ಥರು ರಿಷಿ ಅವರನ್ನು ಸ್ವಾಗತಿಸುವ ಸಲುವಾಗಿ ನವದೆಹಲಿಯಲ್ಲಿ ಔತಣಕೂಟ ಆಯೋಜಿಸಲು ಮುಂದಾಗಿದ್ದಾರೆ.

ಗುರುವಾರ ಅಥವಾ ಶುಕ್ರವಾರದಂದು ನವದೆಹಲಿಯಲ್ಲಿ ಸುನಕ್ ಅವರ ಸಂಬಂಧಿಕರು ಪಂಜಾಬಿ ನೃತ್ಯ, ಔತಣಕೂಟ ಆಯೋಜಿಸುವ ಚಿಂತನೆಯಿದೆ. ಸುನಕ್ ಅವರ ತಾಯಿಯ ಚಿಕ್ಕಪ್ಪ ಗೌತಮ್ ದೇವ್ ಸೂದ್, ಈ ನಿಟ್ಟಿನಲ್ಲಿ ಸಿದ್ಧತೆಯಲ್ಲಿ ತೊಡಗಿದ್ದು, ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸುವ ಸುನಕ್‌ ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸುನಕ್‌, ಅಕ್ಷತಾ ಮೂರ್ತಿ ಅವರಿಗೆ ಸಿದ್ಧಪಡಿಸಲಾದ ಊಟದ ಮೆನುವಿನಲ್ಲಿ ಉತ್ತರ ಮತ್ತು ದಕ್ಷಿಣ ಭಾರತೀಯ ಪಾಕ ವೈವಿಧ್ಯ ಒಳಗೊಂಡಿದೆ ಎಂದು ಎಂದು ಸೂದ್ ತಿಳಿಸಿದ್ದಾರೆ. ಸುನಕ್‌ ತಮ್ಮ ಪೂರ್ವಜರು ಹುಟ್ಟಿ ಬೆಳೆದ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ನಮಗೆ ದೊಡ್ಡ ಗೌರವ ಎಂದು ಸೂದ್‌ ಹೇಳಿದ್ದಾರೆ.

ನಾವು ಸಾಂಪ್ರದಾಯಿಕ ಪಂಜಾಬಿ ಸಂಗೀತ ನೃತ್ಯ ಆಯೋಜಿಸಲು ಸಿದ್ಧರಾಗಿದ್ದೇವೆ. ಅಲ್ಲದೆ ಕೆಲ ಇಂಗ್ಲಿಷ್‌ ಪದ್ಯ ನೃತ್ಯಗಳೂ ಕೂಡ ಇರುತ್ತವೆ ಎಂದು ಸುನಕ್ ಅವರ ತಂದೆಯ ಚಿಕ್ಕಪ್ಪ ಸುಭಾಷ್ ಬೆರ್ರಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು