News Karnataka Kannada
Monday, May 06 2024
ವಿದೇಶ

ಚೀನಾ ಮಾಜಿ ಪ್ರಧಾನಿ ಲೀ ಕೆಕಿಯಾಂಗ್‌ ಹೃದಯಾಘಾತದಿಂದ ನಿಧನ

Former Chinese Premier Li Keqiang dies of heart attack
Photo Credit : IANS

ಬೀಜಿಂಗ್‌: ಚೀನಾದ ಮಾಜಿ ಪ್ರಧಾನಿ, ದೇಶದ ಪ್ರಮುಖ ಆರ್ಥಿಕ ತಜ್ಞರಲ್ಲಿ ಒಬ್ಬರೆನಿಸಿದ್ದ ಲೀ ಕೆಕಿಯಾಂಗ್‌ (68) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶಾಂಘೈನಲ್ಲಿ ಗುರುವಾರ (ಅ.26) ಲೀ ಕೆಕಿಯಾಂಗ್‌ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಇಂದು(ಅ. 27) ಬೆಳಗಿನ ಜಾವ ಅವರು ಮೃತಪಟ್ಟಿದ್ದಾರೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಲೀ ಕೆಕಿಯಾಂಗ್‌ ಅವರು 2013-23ರವರೆಗೆ ಚೀನಾದ ಪ್ರಧಾನಿಯಾಗಿದ್ದರು. ಕಳೆದ ಮಾರ್ಚ್‌ನಲ್ಲಿ ಇವರ ಅಧಿಕಾರದ ಅವಧಿ ಮುಗಿದಿತ್ತು. ಕ್ಸಿ ಜಿನ್‌ಪಿಂಗ್‌ ಅವರು ತಮ್ಮ ಅಧಿಕಾರ ಭದ್ರಗೊಳಿಸುವ ಹಾಗೂ ಆರ್ಥಿಕ ಮತ್ತು ಸಮಾಜಿಕ ವಲಯದಲ್ಲಿ ಪ್ರಬಲ ಅಧಿಕಾರ ಹೊಂದಿದ ಬಳಿಕ ಲೀ ಕೆಕಿಯಾಂಗ್‌ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಇವರು ಆರ್ಥಿಕ ತಜ್ಞರೂ ಆಗಿದ್ದು, ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಲವು ಆರ್ಥಿಕ ಸುಧಾರಣೆಗಳಿಗೂ ಮುನ್ನುಡಿ ಬರೆದಿದ್ದರು. ಲೀ ಕೆಕಿಯಾಂಗ್‌ ಅಧಿಕಾರದ ಅವಧಿ ಮುಗಿಯುತ್ತಲೇ ಕ್ಸಿ ಜಿನ್‌ಪಿಂಗ್‌ ಅವರು ತಮ್ಮ ಆಪ್ತ ಲೀ ಕಿಯಾಂಗ್‌ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು