ಜೆರುಸಲೇಂ: ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡುವ ಉತ್ಸಾಹದಲ್ಲಿರುವ ಇಸ್ರೇಲ್ ಈಗ ಮೂವರು ಪ್ರಮುಖ ಹಮಾಸ್ ಉಗ್ರರನ್ನು ಹೊಡೆದುರುಳಿಸಿದೆ. ಹಮಾಸ್ ಉಗ್ರ ಸಂಘಟನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ, ಇಸ್ರೇಲ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಮೂವರು ಹಿರಿಯ ಹಮಾಸ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಯೇ ಹತ ಉಗ್ರರ ಫೋಟೊಗಳ ಸಮೇತ ಮಾಹಿತಿ ನೀಡಿದೆ.
ʼಐಡಿಎಫ್ ಹಾಗೂ ಗುಪ್ತಚರ ಇಲಾಖೆಯ ನಿಖರ ಮಾಹಿತಿ ಮೇರೆಗೆ ಐಡಿಎಫ್ ಯುದ್ಧವಿಮಾನಗಳ ಮೂಲಕ ದಾಳಿ ನಡೆಸಿ, ಹಮಾಸ್ನ ದರಾಜ್ ತುಫಾ ಬೆಟಾಲಿಯನ್ನ ಮೂವರು ಪ್ರಮುಖ ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೂವರು ಉಗ್ರರು ಅಕ್ಟೋಬರ್ 7ರಂದು ಸಾವಿರಾರು ರಾಕೆಟ್ಗಳ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಲು ಪ್ರಮುಖ ಪಾತ್ರ ವಹಿಸಿದ್ದಾರೆʼ ಎಂದು ಐಡಿಎಫ್ ಪೋಸ್ಟ್ ಮಾಡಿದೆ.
ಹತ್ಯೆಗೀಡಾದ ಮೂವರು ಉಗ್ರರನ್ನು ಬೆಟಾಲಿಯನ್ ಕಮಾಂಡರ್ ರಿಫಾತ್ ಅಬ್ಬಾಸ್, ಬೆಟಾಲಿಯನ್ ಡೆಪ್ಯೂಟಿ ಕಮಾಂಡರ್ ಇಬ್ರಾಹಿಂ ಜಬ್ದಾ ಹಾಗೂ ಕೋಂಬಾಟ್ ಸಪೋರ್ಟ್ ಕಮಾಂಡರ್ ತಾರೆಕ್ ಮಾರೌಫ್ ಎಂದು ಗುರುತಿಸಲಾಗಿದೆ.
Based on precise IDF and ISA intelligence, IDF fighter jets struck 3 senior Hamas operatives in the Daraj Tuffah Battalion.
The battalion's operatives played a significant role in the invasion and murderous attack against Israel on October 7, and is considered to be the most… pic.twitter.com/WOnmE2Cv3O
— Israel Defense Forces (@IDF) October 26, 2023