News Karnataka Kannada
Monday, April 29 2024
ವಿದೇಶ

ಖ್ಯಾತ ನಟಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆ

Acter
Photo Credit : News Kannada

ಢಾಕಾ: ಇತ್ತೀಚೆಗೆ ಕೇರಳದ ನಟಿಯರಿಬ್ಬರೂ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿತ್ತು. ಇದೀಗ ಖ್ಯಾತ ನಟಿಯೊಬ್ಬರು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆಯಲಾರಂಭಿಸಿದೆ ಎಂದು ವರದಿಯಾಗಿದೆ.
ಗುರುವಾರ(ನ.2 ರಂದು) ಬಾಂಗ್ಲಾದೇಶದ ನಟಿ ಹುಮೈರಾ ಹಿಮು(37) ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಆ್ಯಕ್ಟರ್ಸ್ ಇಕ್ವಿಟಿ ಗಿಲ್ಡ್ ನ ಅಧ್ಯಕ್ಷ ಮತ್ತು ನಟ ಅಹ್ಸಾನ್ ಹಬೀಬ್ ನಾಸಿಮ್ ಹೇಳಿದ್ದಾರೆ. ಹುಮೈರಾ ಅವರ ದೇಹ ಅವರ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರನ್ನು ಉತ್ತರ ಅಧುನಿಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ವೈದ್ಯರು ದೇಹವನ್ನು ಪರೀಕ್ಷಿಸಿದ ವೇಳೆ ನಟಿಯ ಕುತ್ತಿಗೆಯಲ್ಲಿ ಮಸುಕಾದ ಗುರುತೊಂದು ಪತ್ತೆಯಾಗಿದ್ದು, ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಹಾಜರಿದ್ದ ಹುಮೈರಾ ಹಿಮು ಅವರ ಸ್ನೇಹಿತ ಪೊಲೀಸರು ಬರುವ ಮೊದಲು ಅಲ್ಲಿಂದ ಹೊರಟು ಹೋಗಿದ್ದು, ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಸದ್ಯ ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು