ಮನಿಲಾ: ಫಿಲಿಪೈನ್ಸ್ನಲ್ಲಿ ಗುರುವಾರ ಬೆಳಗ್ಗೆ 6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಫಿಲಿಪೈನ್ಸ್ ಭೂಕಂಪನಶಾಸ್ತ್ರ ಅಧ್ಯಯನ ಸಂಸ್ಥೆ ಹೇಳಿದೆ.
ಸ್ಥಳೀಯ ಕಾಲಮಾನ ಮುಂಜಾನೆ 2.10 ಗಂಟೆಗೆ ಸಂಭವಿಸಿದ ಭೂಕಂಪವು 10 ಕಿಮೀ ಆಳದಲ್ಲಿ, ಲುಜಾನ್ ಮುಖ್ಯ ದ್ವೀಪದ ಮಸ್ಬೇಟ್ ಪ್ರಾಂತ್ಯದ ಬಟುವಾನ್ ಪಟ್ಟಣದ ನೈಋತ್ಯಕ್ಕೆ 11 ಕಿಮೀ ದೂರದಲ್ಲಿ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಲ್ಬೇ ಪ್ರಾಂತ್ಯದ ಲೆಗಾಜ್ಪಿ ನಗರ, ಸೊರ್ಸೊಗೊನ್, ಉತ್ತರ ಸಮರ್, ನೀಗ್ರೋಸ್ ಆಕ್ಸಿಡೆಂಟಲ್ ಮತ್ತು ಸದರ್ನ್ ಲೇಟೆ ಸೇರಿದಂತೆ ಲುಜಾನ್ ಮತ್ತು ಮಧ್ಯ ಫಿಲಿಪೈನ್ಸ್ನ ಹಲವಾರು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಯಾವುದೇ ಹಾನಿ ಅಥವಾ ಸಾವು ನೋವುಗಳ ವರದಿಯಾಗಿಲ್ಲ.