News Karnataka Kannada
Wednesday, May 08 2024
ವಿದೇಶ

ಡಬ್ಲಿನ್: ಪೆಟ್ರೋಲ್ ಬಂಕ್ ಸ್ಫೋಟ, 10 ಮಂದಿ ಸಾವು

ವಾಹನದಿಂದ ಪಟಾಕಿಗಳನ್ನು ಇಳಿಸುವಾಗ ಸಂಭವಿಸಿದ ಸ್ಫೋಟದಲ್ಲಿ  ಓರ್ವ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಕೇರಳದ ಚೂರಕ್ಕಾಡ್​ನಲ್ಲಿರುವ ಮನೆಯೊಂದರ ಬಳಿ ನಡೆದಿದೆ.
Photo Credit : Pixabay

ಡಬ್ಲಿನ್: ಐರ್ಲೆಂಡ್ ನ ಡೊನೆಗಲ್ ನ ಪೆಟ್ರೋಲ್ ಬಂಕ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಪ್ರಾಥಮಿಕ ಶಾಲಾ ವಯಸ್ಸಿನ ಬಾಲಕಿ ಸೇರಿದಂತೆ ಹತ್ತು ಮಂದಿ ಮೃತಪಟ್ಟಿರುವುದನ್ನು ಐರಿಷ್ ಪೊಲೀಸರು ಶನಿವಾರ ದೃಢಪಡಿಸಿದ್ದಾರೆ.

ಆಪಲ್  ಗ್ರೀನ್ ಪೆಟ್ರೋಲ್ ಬಂಕ್ ಮೂಲಕ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಕಟ್ಟಡಗಳು ಮತ್ತು ಕಾರುಗಳು ಸೇರಿದಂತೆ ವ್ಯಾಪಕ ಹಾನಿಗೆ ಕಾರಣವಾಗಿದೆ.  ಎಲ್ಲಾ 10 ಮಂದಿ  ಕ್ರೈಸ್ಲೋ ಪ್ರದೇಶದವರು ಎಂದು ಪೊಲೀಸರು ದೃಢಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ರಿಪಬ್ಲಿಕ್ ಆಫ್ ಐರ್ಲೆಂಡ್ ವಾಯವ್ಯ ತುದಿಯ ಸಮೀಪದಲ್ಲಿರುವ ಕ್ರೀಸ್ಲೋಫ್ನ ಹೊರವಲಯದಲ್ಲಿರುವ ಆಪಲ್  ಗ್ರೀನ್ ಪೆಟ್ರೋಲ್ ಬಂಕ್ ನಲ್ಲಿ ಮಧ್ಯಾಹ್ನ 3:00 ಗಂಟೆ  ಈ ಸ್ಫೋಟ ಸಂಭವಿಸಿದೆ.

ಶೋಧ ಮತ್ತು ರಕ್ಷಣಾ ಪ್ರಯತ್ನಗಳು ಮುಂದುವರೆದಿವೆ  ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ ಸ್ಫೋಟದ ಕಾರಣ ತಿಳಿದುಬಂದಿಲ್ಲ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು