News Karnataka Kannada
Thursday, May 02 2024
ವಿದೇಶ

ಅಟ್ಲಾಂಟಾ ಕೋರ್ಟ್‌ಗೆ ಶರಣಾಗಲಿರುವ ಡೊನಾಲ್ಡ್‌ ಟ್ರಂಪ್‌

FBI raids former Us President Donald Trump's house
Photo Credit : News Kannada

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜಾರ್ಜಿಯ ಪ್ರಾಂತ್ಯದ ಅಟ್ಲಾಂಟ ನ್ಯಾಯಾಲಯಕ್ಕೆ ಗುರುವಾರ ಶರಣಾಗಲಿದ್ದಾರೆ. ಜಾರ್ಜಿಯ ಪ್ರಾಂತ್ಯದಲ್ಲಿ 2020ರ ಅಧ್ಯಕ್ಷೀಯ ಚುನಾವಣೆ ಫ‌ಲಿತಾಂಶವನ್ನು ಅಕ್ರಮವಾಗಿ ತಿದ್ದಲು ಯತ್ನಿಸಿದ ಆರೋಪ ಅವರ ಮೇಲಿದೆ.

ಈ ಬಗ್ಗೆ ಅವರು ಜಾಲತಾಣಗಳಲ್ಲಿ “ನೀವು ನಂಬುತ್ತೀರಾ? ನಾನು ಗುರುವಾರ ಜಾರ್ಜಿಯದ ಅಟ್ಲಾಂಟಕ್ಕೆ ಬಂಧನಕ್ಕೊಳಗಾಗಲು ಹೋಗುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಅವರು ಕೋರ್ಟ್‌ಗೆ ಶರಣಾಗತರಾದರೂ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ. ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗುವ ಷರತ್ತಿನ ಆಧಾರದಲ್ಲಿ ಹೊರಗೆಯೇ ಇರಲಿದ್ದಾರೆ. ಆದರೆ ಬಾಂಡ್‌ನ‌ಲ್ಲಿ ಅವರು ಹಲವು ಷರತ್ತುಗಳಿಗೆ ಸಹಿ ಹಾಕಲಿದ್ದಾರೆ. ಸಾಕ್ಷಿಗಳು, ಇತರೆ ಅರ್ಜಿದಾರರ ಮೇಲೆ ಯಾವುದೇ ರೀತಿಯ ಒತ್ತಡ ಹಾಕುವುದು, ಕಿರಿಕಿರಿ ಮಾಡುವುದನ್ನು ಮಾಡುವಂತಿಲ್ಲ.

ಹಾಗೆಯೇ ಸಾಮಾಜಿಕ ತಾಣದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್‌, ರೀಪೋಸ್ಟ್‌ ಮಾಡುವಂತಿಲ್ಲ. ಯಾರನ್ನೂ ಗುರಿಯಾಗಿಸಿಕೊಂಡು ತೊಂದರೆ ನೀಡುವಂತಿಲ್ಲ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು