ಅಡೆನ್ : ಬಾಂಬ್ ದಾಳಿಯಲ್ಲಿ ಸರ್ಕಾರಿ ಪಡೆಗಳ ಮೂವರು ಸೈನಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿರುವ ಘಟನೆ ಯೆಮನ್ ನ ದಕ್ಷಿಣ ಅಬ್ಯಾನ್ ಪ್ರಾಂತ್ಯದಲ್ಲಿ ನಡೆದಿದೆ.
ಪೂರ್ವ ಅಬ್ಯಾನ್ ನ ಮುದಿಯಾ ಜಿಲ್ಲೆಯ ವಾಡಿ ಒಮೈರಾನ್ ಪ್ರದೇಶದಲ್ಲಿ ಮಿಲಿಟರಿ ಗಸ್ತು ಬಳಿ ಶುಕ್ರವಾರ ಸ್ಫೋಟಕ ಸಾಧನ ಸ್ಫೋಟಗೊಂಡಾಗ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಸ್ಫೋಟದಿಂದ ಗಸ್ತು ವಾಹನ ಸುಟ್ಟು ಹೋಗಿದ್ದು, ಮೂವರು ಸೈನಿಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅವರು ದೃಢಪಡಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.