News Karnataka Kannada
Monday, May 06 2024
ವಿದೇಶ

9/11ರ ದಾಳಿಯಲ್ಲಿ ಮೃತಪಟ್ಟವರನ್ನು ಸ್ಮರಿಸಿದ ಬೈಡನ್

Joe Biden 20082021
Photo Credit :
ವಾಷಿಂಗ್ಟನ್: ಅಮೆರಿಕಾದ ಅವಳಿ ಗೋಪುರಗಳ ಮೇಲೆ ದಾಳಿ ನಡೆದು ಇಂದಿಗೆ ಬರೋಬ್ಬರಿ  20 ವರ್ಷಗಳು ಕಳೆದಿದೆ , ಈ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿದ್ದಾರೆ.
2001ರ ಸೆಪ್ಪೆಂಬರ್‌ 11ರಂದು ನ್ಯೂಯಾರ್ಕ್‌ ಸಿಟಿ, ಅರ್ಲಿಂಗ್ಟನ್‌, ವರ್ಜಿನಿಯಾ, ಪೆನ್ಸಿಲ್ವೇನಿಯಾ ಮತ್ತು ಶಾಂಕ್ಸ್‌ವಿಲ್ಲೆಯ ಮೇಲೆ ನಡೆದ ಉಗ್ರರ ದಾಳಿಗೆ  ಒಟ್ಟು  2,977 ಜನರು ಮೃತಪಟ್ಟಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ನಿಮ್ಮನ್ನು ಮತ್ತು ನಿಮ್ಮ ಪ್ರೀತಿ ಪಾತ್ರರನ್ನು ಅಮೆರಿಕ ಸ್ಮರಿಸುತ್ತದೆʼ ಎಂದು ಹೇಳಿರುವ ವಿಡಿಯೊವೊಂದನ್ನು ಬೈಡನ್‌ ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ದುರಂತದಿಂದಾಗಿ ಐಕ್ಯತೆಯು ನಮ್ಮ ದೊಡ್ಡ ಶಕ್ತಿಯಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ , ದಾಳಿಯ ನಂತರ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಿದ ಭದ್ರತಾ ಪಡೆಗಳನ್ನು ಶ್ಲಾಘಿಸಿದರು.
ದಾಳಿಯ ನಂತರ ರಕ್ಷಣಾ ಕಾರ್ಯದಲ್ಲಿ ತೊಡಗಿದ, ಅಗ್ನಿಶಾಮಕ ದಳದವರು, ಪೊಲೀಸ್ ಅಧಿಕಾರಿಗಳು, ಕಾರ್ಮಿಕರು, ವೈದ್ಯರು ಮತ್ತು ದಾದಿಯರು ಸೇರಿದಂತೆ ಎಲ್ಲರನ್ನೂ ನಾವು ಗೌರವಿಸುತ್ತೇವೆ ಎಂದು ಜೋ ಬೈಡನ್ ತಿಳಿಸಿದ್ದಾರೆ.
ಅಮೆರಿಕ ಇತಿಹಾಸದಲ್ಲೇ ಈ ದಾಳಿ ಅತ್ಯಂತ ಭೀಕರವಾಗಿದ್ದು, ಸುಮಾರು 102 ನಿಮಿಷಗಳಲ್ಲಿ ಅಲ್​ಖೈದಾ ಭಯೋತ್ಪಾದಕ ಸಂಘಟನೆಯಿಂದ ಅಪಹರಿಸಲ್ಪಟ್ಟಿದ್ದ ಎರಡು ವಿಮಾನಗಳು ಕೇವಲ 102 ನಿಮಿಷಗಳ ಅವಧಿಯಲ್ಲಿ ಅವಳಿ ಗೋಪುರಗಳಿಗೆ ಅಪ್ಪಳಿಸಿದ್ದವು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು