News Karnataka Kannada
Monday, April 29 2024
ವಿದೇಶ

ಟರ್ಕಿ ಸಚಿವಾಲಯದ ಮೇಲಿನ ದಾಳಿ ಪ್ರತೀಕಾರ: ಪಿಕೆಕೆಯ 20 ಅಡಗುತಾಣಗಳು ನಾಶ

20 PKK hideouts destroyed in retaliation for attack on Turkish ministry
Photo Credit : IANS

ಅಂಕಾರಾ: ಉತ್ತರ ಇರಾಕ್‌ನಲ್ಲಿ ಟರ್ಕಿಯ ಪಡೆಗಳು ವೈಮಾನಿಕ ದಾಳಿ ನಡೆಸಿ ನಿಷೇಧಿತ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿಯ (ಪಿಕೆಕೆ) 20 ಅಡಗುತಾಣಗಳನ್ನು ನಾಶಪಡಿಸಿವೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.

ಟರ್ಕಿಯ ವಾಯುದಾಳಿಗಳು ಗಾರಾ, ಹಕುರ್ಕ್, ಮೆಟಿನಾ ಮತ್ತು ಕ್ವಾಂಡಿಲ್‌ನಲ್ಲಿರುವ ಪಿಕೆಕೆ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಭಾನುವಾರ ಸಂಜೆ ಸಚಿವಾಲಯ ಹೊರಡಿಸಿದ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಭಾನುವಾರ ಬೆಳಗ್ಗೆ ರಾಜಧಾನಿ ಅಂಕಾರಾದಲ್ಲಿರುವ ಟರ್ಕಿಯ ಆಂತರಿಕ ಸಚಿವಾಲಯದ ಕಟ್ಟಡದ ಮುಂದೆ ಇಬ್ಬರು ದಾಳಿಕೋರರು ಬಾಂಬ್ ದಾಳಿಗೆ ಯತ್ನಿಸಿದ ನಂತರ ಈ ಘಟನೆ ನಡೆದಿದೆ. ಒಬ್ಬ ದಾಳಿಕೋರನು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಮತ್ತೊಬ್ಬ ಪೋಲೀಸರ ಗುಂಡಿಗೆ ಬಲಿಯಾಗಿದ್ದಾನೆ. ದಾಳಿಕೋರರಲ್ಲಿ ಒಬ್ಬನನ್ನು ಪಿಕೆಕೆ ಸದಸ್ಯ ಎಂದು ಗುರುತಿಸಲಾಗಿದ್ದು, ಮತ್ತೊಬ್ಬನ ಗುರುತು ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಟರ್ಕಿಯ ಪಡೆಗಳುಪಿಕೆಕೆವಿರುದ್ಧ ಉತ್ತರ ಇರಾಕ್‌ನಲ್ಲಿ ಆಗಾಗ್ಗೆ ವೈಮಾನಿಕ ದಾಳಿ ನಡೆಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು