ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧಾತಂಕದ ಸಂದರ್ಭದಲ್ಲಿ ಇಸ್ರೇಲ್ ಸಿರಿಯಾದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಬಗ್ಗೆ ಸಿರಿಯಾ ಮಿಲಿಟಿರಿ ಮಾಹಿತಿ ನೀಡಿದ್ದು, ಇಸ್ರೇಲ್ ಆಕ್ರಮಿತ ಸಿರಿಯಾದ ಗೋಲನ್ ಹೈಟ್ಸ್ ನಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ.
ಈ ರೀತಿ ದಿಢೀರ್ ದಾಳಿಯಿಂದ ಸಿರಿಯಾದ ಸೇನಾ ನೆಲೆಗಳು ಧ್ವಂಸಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದೆ.
ಹಲವು ದಶಕಗಳಿಂದ ಉಭಯ ದೇಶಗಳ ನಡುವೆ ದಾಳಿಗಳು ನಡೆಯುತ್ತಿದೆ. ಆದರೆ ಇಂದು ನಡೆದ ಈ ಕ್ಷಿಪಣಿ ದಾಳಿಯ ಕುರಿತು ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ 1967ರಲ್ಲಿ ನಡೆದ ಯುದ್ಧದಲ್ಲಿ ಇಸ್ರೇಲ್ ಗೋಲನ್ ಹೈಟ್ಸ್ ಅನ್ನು ವಶಪಡಿಸಿಕೊಂಡಿತ್ತು.