News Karnataka Kannada
Monday, April 29 2024
ವಿದೇಶ

ಚೀನಾದ ವಾಯವ್ಯಭಾಗದಲ್ಲಿರುವ ಗನ್ಸು ಪ್ರಾಂತ್ಯದಲ್ಲಿ ಹೊಸದಾಗಿ ಕೋವಿಡ್‌ ಪ್ರಕರಣಗಳು ಪತ್ತೆ

China
Photo Credit :

ಬೀಜಿಂಗ್‌ : ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿರುವ ಚೀನಾದ ವಾಯವ್ಯಭಾಗದಲ್ಲಿರುವ ಗನ್ಸು ಪ್ರಾಂತ್ಯದಲ್ಲಿ ಹೊಸದಾಗಿ ಕೋವಿಡ್‌ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಆ ಭಾಗದ ಎಲ್ಲ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ. ಪ್ರಾಚೀನ ಸಿಲ್ಕ್‌ ರೂಟ್‌ನಲ್ಲಿರುವ ಗನ್ಸು ಪ್ರಾಂತ್ಯವು ಬೌದ್ಧ ಚಿತ್ರಗಳಿಗೆ ಹೆಸರಾಗಿರುವ ಗುಹೆಗಳು(ಡುನ್‌ಹೌಆಂಗ್‌ ಗ್ರೊಟ್ಟೊಯಿಸ್‌) ಮತ್ತು ಇತರ ಧಾರ್ಮಿಕ ಸ್ಥಳಗಳಿಂದ ಖ್ಯಾತಿ ಪಡೆದಿದೆ.

ಈ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಸ್ಥಳೀಯವಾಗಿ ಪ್ರಸರಣವಾಗಿರುವ 35 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ನಾಲ್ಕು ಗನ್ಸು ನಗರಕ್ಕೆ ಸೇರಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಮಂಗೋಲಿಯಾ ವಲಯದ ಒಳಭಾಗದಲ್ಲಿ 19 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಕೆಲವೊಂದು ಪ್ರಾಂತ್ಯಗಳಿಗೆ ಮತ್ತು ನಗರಗಳಿಗೆ ಹರಡಿರುವ ಸಾಧ್ಯತಯೂ ಇದೆ. ಮಂಗೋಲಿಯಾ ಒಳಭಾಗದಲ್ಲಿರುವ (ಇನ್ನರ್ ಮಂಗೋಲಿಯ) ಕೆಲವು ಕಡೆಗಳಲ್ಲಿ ಜನರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

ಫೆಬ್ರವರಿಯಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಪ್ರಯಾಣಿಕರು ಮತ್ತು ಪ್ರವಾಸಿ ಗುಂಪುಗಳಿಗೆ ಕೋವಿಡ್‌ ಸಾಂಕ್ರಾಮಿಕದ ಡೆಲ್ಟಾ ರೂಪಾಂತರ ಸೋಂಕು ಹರಡುವುದನ್ನು ತಡೆಗಟ್ಟಲು ಕಾಳಜಿ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಪ್ರೇಕ್ಷಕರಿಗೆ ಒಲಿಂಪಿಕ್ಸ್ ಪ್ರವೇಶವನ್ನು ನಿಷೇಧಿಸಲಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಹೊರದೇಶದ ಕ್ರೀಡಾಪಟುಗಳು ಕಡ್ಡಾಯವಾಗಿ ಪ್ರತ್ಯೇಕ ವಾಸದಲ್ಲಿರಬೇಕೆಂದು ತಿಳಿಸಲಾಗಿದೆ.

ಹೊರ ದೇಶಗಳಿಂದ ಭಾನುವಾರ ರಾಜಧಾನಿ ಬೀಜಿಂಗ್‌ಗೆ ಬಂದಿಳಿದ ಜನರನ್ನು ತಪಾಸಣೆಗೆ ಒಳಪಡಿಸಿದ ಅಧಿಕಾರಿಗಳು, ಅವರಿಂದ ನೆಗೆಟಿವ್ ವರದಿಯ ಜೊತೆಗೆ, ಸಾಮಾನ್ಯ ಆರೋಗ್ಯ ತಪಾಸಣಾ ವರದಿಯನ್ನು ಕೊಡುವಂತೆ ಕೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು