ವೆಲ್ಲಿಂಗ್ಟನ್, ನ.11 : ಇಂಡೋ ಫೆಸಿಫಿಕ್ ಪ್ರಾಂತ್ಯದಲ್ಲಿ ಶಾಂತಿ ಸ್ಥಾಪನೆ ಹೆಸರಿನಲ್ಲಿ ಮಾನಸಿಕವಾಗಿ ಶೀತಲ ಸಮರಕ್ಕೆ ಮುನ್ನುಡಿ ಬರೆಯಲಾಗುತ್ತಿದೆ ಎಂದು ಚೀನಾ ಗಂಭೀರ ಆರೋಪ ಮಾಡಿದೆ.
ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಅಮೆರಿಕಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಹೊಸ ಭದ್ರತಾ ನೀತಿ ಅಳವಡಿಸಿಕೊಳ್ಳಲು ಮುಂದಾಗಿರುವುದನ್ನು ಉದ್ದೇಶಿಸಿ ಚೀನಾ ಅಧ್ಯಕ್ಷ ಕ್ಸಿ-ಜಿನ್ಪಿಂಗ್ ಈ ಆರೋಪ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ನಲ್ಲಿ ನಡೆಯುತ್ತಿರುವ ಅಪೆಕ್ ಶೃಂಗಸಭೆಯ ವರ್ಚುಯಲ್ ಭಾಷಣದಲ್ಲಿ ಜಿನ್ಪಿಂಗ್ ವಿಶ್ವದ ಮೂರು ಪ್ರಬಲ ರಾಷ್ಟ್ರಗಳ ವಿರುದ್ಧ ಹರಿಹಾಯ್ದಿದ್ದಾರೆ. ಇಂಡೋ ಪೆಸಿಫಿಕ್ ಪ್ರಾಂತ್ಯದ ಗಡಿ ಗುರುತಿಸುವಿಕೆಯಲ್ಲಿ ವಿಫಲವಾಗಿರುವುದರಿಂದ ಅಲ್ಲಿ ಮಾನಸಿಕ ಶಿತಲ ಸಮರದ ಮೂಲಕ ನಮ್ಮನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇಂಡೋ ಫೆಸಿಫಿಕ್ ಪ್ರಾಂತ್ಯದಲ್ಲಿ ವ್ಯಾಪಾರ ಮತ್ತು ಹೂಡಿಕೆ ಉದಾರೀಕರಣಗೊಳಿಸುವುದನ್ನು ಮುಂದುವರೆಸಬೇಕು ಮತ್ತು ಅಲ್ಲಿನ ಸರಬರಾಜು ಮಾರ್ಗಗಳು ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.