News Karnataka Kannada
Tuesday, April 30 2024
ವಿದೇಶ

ರಷ್ಯಾ ನ್ಯಾಯಾಲಯದಿಂದ ಗೂಗಲ್ ಹಾಗೂ ಫೇಸ್ ಬುಕ್ ಗೆ ಭಾರೀ ದಂಡ

Google And Facebook
Photo Credit :

ಮಾಸ್ಕೋ :  ಕೆಲವು ಅಂಶಗಳನ್ನು  ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಬಾರದು  ಎಂಬ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ಹಲವಾರು ಕಾನೂನುಗಳನ್ನು ಜಾರಿಗೊಳಿಸುತ್ತಿವೆ. ಆದರೆ, ಇದಕ್ಕೆ ಸಾಮಾಜಿಕ ಜಾಲತಾಣಗಳು ಸರಿಯಾಗಿ ಸ್ಪಂದಿಸದೆ ದಂಡಕ್ಕೆ ಗುರಿಯಾದ ಸಂಗತಿ ನಡೆದಿದೆ.

ಗೂಗಲ್ ಹಾಗೂ ಫೇಸ್ ಬುಕ್ ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳ ಕುರಿತು ಸೇರಿದಂತೆ ಕೆಲವು ಅಂಶಗಳನ್ನು ತೆಗೆದು ಹಾಕುವಂತೆ ಸೂಚಿಸಲಾಗಿದ್ದರೂ ತೆಗೆಯದ ಕಾರಣ ಭಾರೀ ದಂಡ ವಿಧಿಸಲಾಗಿದೆ.

ನಿಷೇಧಿತ ಮಾಹಿತಿಯನ್ನು ತೆಗೆದು ಹಾಕಲು ಗೂಗಲ್ ಹಾಗೂ ಫೇಸ್ ಬುಕ್ ಮೂಲ ಹೆಸರಿನ ಮೆಟಾಗೆ ಮಾಸ್ಕೋ ನ್ಯಾಯಾಲಯ ಭಾರೀ ದಂಡ ವಿಧಿಸಿದೆ. ನಿಷೇಧಿತ ಅಂಶಗಳನ್ನು ತೆಗೆದು ಹಾಕಬೇಕೆಂದು ಹಲವು ಬಾರಿ ಸೂಚನೆ ನೀಡಿದರೂ ಕೇಳದ ಮೆಟಾಗೆ 175 ಕೋಟಿ ರೂಪಾಯಿ ಹಾಗೂ ಗೂಗಲ್ ಗೆ 750 ಕೋಟಿ ರೂಪಾಯಿ ದಂಡ ವಿಧಿಸಿ ಮಾಸ್ಕೋದ ಟ್ಯಾಗನ್ಸ್ಕಿ ಕೋರ್ಟ್ ಆದೇಶ ನೀಡಿದೆ.

 

ಇನ್ನಿತರ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಿಗೆ ಈ ದಂಡದ ಮೂಲಕ ಸಂದೇಶ ಸಾರಿದಂತಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದು ರಷ್ಯಾದ ಅಧಿಕಾರಿ ಅಲೆಕ್ಸಾಂಡರ್ ಕಿನ್ ಸ್ಟೈನ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು