ರಷ್ಯಾ ಯುಕ್ರೇನ್ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪುವ ಹೊತ್ತಲ್ಲೇ ರಷ್ಯಾ, ವಿಶ್ವದ ಅತ್ಯಂತ ಭಯಾನಕ ಕ್ಷಿಪಣಿ ಪರೀಕ್ಷೆ ಮಾಡಿದೆ. ದಿ ಸರ್ಮತ್ ಡಿಸೈನ್ ಮಾಡಿದವರು ಈ ಖಂಡಾಂತರ ಕ್ಷಿಪಣಿಗೆ ʼಸತನ್ ಟುʼ ಅಂತ ಹೆಸರಿಡಲಾಗಿದ್ದು ಸದ್ಯ ವಿಶ್ವದ ಅತಿ ಬಲಿಷ್ಠ ಹಾಗು ನೆಕ್ಸ್ಟ್ ಜನರೇಶನ್ ಕ್ಷಿಪಣಿ ಅಂತ ರಷ್ಯಾ ಹೇಳಿದೆ.
ಇದು 200 ಟನ್ನಷ್ಟು ತೂಕ ಹೊಂದಿದ್ದು ಏಕಕಾಲಕ್ಕೆ ಹತ್ತುಸಿಡಿತಲೆಗಳನ್ನ ಹೊತ್ತೊಯ್ಯುವ ಸಾಮರ್ಥ್ಯ ಇದೆ ಅಂತ ಹೇಳಲಾಗಿದೆ. ಅಲ್ದೇ ನ್ಯೂಕ್ಲಿಯರ್ ಬಾಂಬ್ ಗಳನ್ನ ಕೂಡ ಇದು ಕ್ಯಾರಿ ಮಾಡಲಿದ್ದು ಭೂಮಿಯ ಯಾವುದೇ ಭಾಗದ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.
ಇನ್ನು ಕ್ಷಿಪಣಿ ಪರೀಕ್ಷೆ ಯಶಸ್ವಿಯಾದುದಕ್ಕೆ ತಮ್ಮ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿ ಮಾತನಾಡಿರೋ ರಷ್ಯಾ ಅಧ್ಯಕ್ಷ ಪುಟಿನ್ “ಇದು ತುಂಬಾ ವಿಶಿಷ್ಟವಾದ ಕ್ಷಿಪಣಿ. ಭೂಮಿಯ ಮೇಲಿನ ಯಾವುದೇ ಟಾರ್ಗೆಟ್ಅನ್ನಇದು ನಾಶ ಮಾಡುವ ಶಕ್ತಿ ಹೊಂದಿದೆ. ರಷ್ಯಾ ಸೇನೆಯ ಸಾಮರ್ಥ್ಯವನ್ನ ಇದು ಖಂಡಿತಾ ಹೆಚ್ಚಿಸುತ್ತೆ. ರಷ್ಯಾಗೆ ಎದುರಾಗುವ ಸಮಸ್ಯೆಗಳಿಂದ ಇದು ನಿಸ್ಸಂಶಯವಾಗಿ ಕಾಪಾಡುತ್ತೆ. ಆಕ್ರಮಣಕಾರಿ ಮಾತುಗಳನ್ನ ಆಡುವವರಿಗೆ ಬಿಸಿಮುಟ್ಟಿಸುತ್ತೆ. ನಮ್ಮನ್ನ ಎದುರಿಸುವ ಮುಂಚೆ ಇನ್ನು ಎರಡೆರಡು ಬಾರಿ ಯೋಚನೆ ಮಾಡಬೇಕು ” ಅಂತ ಪಾಶ್ಚೀಮಾತ್ಯರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ರಷ್ಯಾದ ಕ್ಷಿಪಣಿ ಪರೀಕ್ಷೆ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕಾ ಇದು ರಷ್ಯಾ ಎಂದಿನಂತೆ ಮಾಡುವ ಕ್ಷಿಪಣಿ ಪರೀಕ್ಷೆಯೇ ಆಗಿದೆ. ಇದರಿಂದ ಅಮೆರಿಕಾಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಅಂತ ಹೇಳಿದೆ..