ಬೀಜಿಂಗ್ : ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಜೊತೆ ಸಭೆ ನಡೆಸಿದ್ದರು. ಶುಕ್ರವಾರ ಚೀನಾದ ವಿದೇಶಾಂಗ ಇಲಾಖೆ ವೀಸಾ ನೀಡುವ ತೀರ್ಮಾನ ಪ್ರಕಟಿಸಿದೆ.
ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿ ವ್ಯಾಸಂಗ ಮಾಡಲು ಚೀನಾ ವೀಸಾ ನೀಡಲಿದೆ. ಇದರಿಂದಾಗಿ ಅಧ್ಯಯನದ ಉದ್ದೇಶಕ್ಕೆ ಚೀನಾಗೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ.
ಚೀನಾಗೆ ಮರಳಲು ಬಯಸುವ ವಿದ್ಯಾರ್ಥಿಗಳು ಮೇ 8ರೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಪ್ರವಾಸಿ ವೀಸಾ ಇಲ್ಲ ಚೀನಾಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ವೀಸಾ ಸಿಕ್ಕಿದರೂ ಪ್ರವಾಸಿ ವೀಸಾ ಸದ್ಯಕ್ಕೆ ಸಿಗುವುದಿಲ್ಲ. ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಮಾತನಾಡಿ, “ಚೀನಾದ ವಿವಿಧ ನಗರದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಅರಿವು ಇದೆ. ಪ್ರವಾಸಿ ವೀಸಾವನ್ನು ಮತ್ತೆ ನೀಡಲು ಇದು ಸೂಕ್ತವಾದ ಸಮಯವಲ್ಲ” ಎಂದು ಹೇಳಿದ್ದರು.