ಬ್ರಿಟನ್ ನಲ್ಲಿ ಕೊರೋನಾ ರೂಪಾಂತರಿ ತಳಿಯಾಗಿರುವ ಒಮಿಕ್ರಾನ್ ತನ್ನ ಆರ್ಭಟ ಹೆಚ್ಚಿಸಿದ್ದು, ಶನಿವಾರ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಈ ಬಗ್ಗೆ ಬ್ರಿಟನ್ ನ ಹೆಲ್ತ್ ಸೆಕ್ಯುರಿಟಿ ಏಜನ್ಸಿ ಮಾಹಿತಿ ನೀಡಿದ್ದು, ಶನಿವಾರ ಒಂದೇ ದಿನ 10,059 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲೀಗ 24,968 ಒಮಿಕ್ರಾನ್ ಸಕ್ರಿಯ ಸೋಂಕಿತರಿದ್ದಾರೆ ಎಂದು ತಿಳಿಸಿದೆ.
ಬ್ರಿಟನ್ ನಲ್ಲಿ ಒಮಿಕ್ರಾನ್ ಆತಂಕ ಹೆಚ್ಚಾಗಿದ್ದು, ಈವರೆಗೆ 7 ಮಂದಿ ರೂಪಾಂತರಿ ಸೋಂಕಿಗೆ ಬಲಿಯಾಗಿದ್ದಾರೆ. ಓಮಿಕ್ರಾನ್ ಜತೆಗೆ ಕೋವಿಡ್ ಸೋಂಕಿತರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದ್ದು, ದಿನಕ್ಕೆ 90 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮೂಲಕ ಬ್ರಿಟನ್ ನಲ್ಲಿ 1,12,79,428 ಕೋವಿಡ್ ಸೋಂಕಿತರಿದ್ದಾರೆ.