ಬರ್ಲಿನ್: ಮೂರು ದಿನಗಳ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ.
ಬರ್ಲಿನ್ ಏರ್ಪೋರ್ಟ್ನಿಂದ ಆಗಮಿಸಿದ ಮೋದಿ ಅವರನ್ನು ಭಾರತೀಯ ಮೂಲದ ನಿವಾಸಿಗಳು ಹೂಗುಚ್ಚ ನೀಡಿ ಬರಮಾಡಿಕೊಂಡರು.
ಯೂರೋಪಿಯನ್ ರಾಷ್ಟ್ರಗಳಿಗೆ ವಿಸಿಟ್ ಮಾಡುವ ಮೋದಿ ಪರಸ್ಟರ ವಾಣಿಜ್ಯ, ವ್ಯಾಪಾರ ಒಪ್ಪಂದಗಳ ವಿಚಾರವಾಗಿ ಮಾತುಕತೆ ನಡೆಸಲಿದ್ದಾರೆ. ಡೆನ್ಮಾರ್ಕ್, ಫ್ರಾನ್ಸ್ಗಳಿಗೆ ಭೇಟಿ ಮಾಡುವ ಮೋದಿ ಅಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪರಿಣಾಮಗಳ ಸಂಬಂಧವೂ ಸಮಾಲೋಚನೆ ಮಾಡಲಿದ್ದಾರೆ.