News Karnataka Kannada
Wednesday, May 01 2024
ವಿದೇಶ

ಫ್ರಾನ್ಸ್ ನಲ್ಲಿ ಒಂದೇ ದಿನದಲ್ಲಿ ಒಂದು ಲಕ್ಷ ಕೋವಿಡ್ ಕೇಸ್, ಟಫ್ ರೂಲ್ಸ್ ಜಾರಿ

Covid Corona
Photo Credit :

ಫ್ರಾನ್ಸ್: ಫ್ರಾನ್ಸ್ ನಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ.ಫ್ರಾನ್ಸ್‌ನ ಸಾರ್ವಜನಿಕ ಆರೋಗ್ಯ ಏಜೆನ್ಸಿಯ ಇತ್ತೀಚಿನ ಅಂಕಿಅಂಶಗಳಿಂದ ಈ ಮಾಹಿತಿ ತಿಳಿದು ಬಂದಿದೆ.

ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 104,611 ಜನ ಕೊರೋನಾ ಪಾಸಿಟಿವ್ ಆಗಿದ್ದಾರೆ.ಪರಿಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿರುವ ಫ್ರಾನ್ಸ್ ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಸರ್ಕಾರದ ಪ್ರಮುಖ ಸದಸ್ಯರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪರಿಸ್ಥಿತಿ ನಿಭಾಯಿಸಲು ತೆಗೆದುಕೊಳ್ಳಬಹುದಾದ ಕೋವಿಡ್ ಸುರಕ್ಷತಾ ಕ್ರಮಗಳನ್ನು ಚರ್ಚಿಸಿದ್ದಾರೆ.

ಈ ಸಂದರ್ಭದಲ್ಲಿ ಲಸಿಕೆಯೊಂದೆ ಪರಿಹಾರ ಎಂಬ ನಿರ್ಧಾರಕ್ಕೆ ಬಂದಿರುವ ಫ್ರಾನ್ಸ್ ಸರ್ಕಾರ ವಯಸ್ಕರಿಗೆ ಬೂಸ್ಟರ್ ಡೋಸ್ ನೀಡಲು ಮುಂದಾಗಿದೆ. ಸಂಪೂರ್ಣ ವ್ಯಾಕ್ಸಿನೇಷನ್ ಆದ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಬೇಕೆಂಬ ಆದೇಶ ಹೊರಡಿಸಿರುವ ಫ್ರಾನ್ಸ್ ಸರ್ಕಾರ, ಬೂಸ್ಟರ್ ಡೋಸ್ ಪಡೆಯದವರ ಆರೋಗ್ಯ ಪಾಸ್ ಅಮಾನ್ಯ ಮಾಡುವ ಎಚ್ಚರಿಕೆ ನೀಡಿದೆ.

ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಕ್ಕಾಗಿ, ಹಾಗೆಯೇ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಪಾಸ್ ಅಗತ್ಯವಿದೆ ಎಂಬುವುದನ್ನ ಗಮನಿಸಬೇಕು.

ಸರ್ಕಾರ ಮಾತ್ರವಲ್ಲ ಅಲ್ಲಿನ ಸ್ಥಳೀಯ ಅಧಿಕಾರಿಗಳು ಕೊರೋನಾ ನಿಯಂತ್ರಣಕ್ಕೆ ತಮ್ಮದೇ ಆದ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ, ಸವೊಯಿಯ ಅಧಿಕಾರಿಗಳು ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲದೆ ಹೊರಾಂಗಣದಲ್ಲಿಯೂ ಕಡ್ಡಾಯವಾಗಿ ಮುಖವಾಡಗಳನ್ನು ಧರಿಸುವುದನ್ನು ಮರುಪರಿಚಯಿಸಿದರು.‌

ಈ ಕ್ರಮವನ್ನು ನೆರೆಯ ಇಟಲಿಯು ಅನುಸರಿಸಿದೆ. ತಿಂಗಳ ಆರಂಭದಿಂದ, ಕೊರೋನಾ‌ ಕೇಸ್ ಗಳಲ್ಲಿ ಗಣನೀಯ ಏರಿಕೆಯಾಗಿದೆ. ಸ್ಥಿರವಾಗಿ ಏರಿಕೆಯಾಗ್ತಿದ್ದ ಪ್ರಕರಣಗಳು ಡಿಸೆಂಬರ್ 4ರಂದು 50,000 ಗಡಿ ದಾಟಿತು. ಇಲ್ಲಿಯವರೆಗೆ, ಕೊರೋನ ವೈರಸ್ನಿಂದ ಫ್ರಾನ್ಸ್ ನಲ್ಲಿ 122,546 ಸಾವು ಉಂಟಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು