ಪೆನ್ಸಿಲ್ವೇನಿಯಾ: ಯುಎಸ್ ನ ಪೀಟರ್ಸ್ ಬರ್ಗ್ ನಲ್ಲಿ ನಡೆದ ಹೌಸ್ ಪಾರ್ಟಿಯ ಸಮಯದಲ್ಲಿ ಭಾನುವಾರ ನಡೆದ ಮತ್ತೊಂದು ಶೂಟೌಟ್ ಘಟನೆಯಲ್ಲಿ, ಇಬ್ಬರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ. ಅಲ್ಲದೇ 11 ಜನರು ಗಾಯಗೊಂಡಿದ್ದಾರೆ.
ಪೀಟರ್ಸ್ ಬರ್ಗ್ ನಲ್ಲಿ ನಡೆದ ಹೌಸ್ ಪಾರ್ಟಿಯ ಸಮಯದಲ್ಲಿ ಮಧ್ಯರಾತ್ರಿ 12:30 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಲ್ಲಿ, 200 ಕ್ಕೂ ಹೆಚ್ಚು ಜನರು ಇದ್ದರು. ಅವರಲ್ಲಿ ಅನೇಕರು ಅಪ್ರಾಪ್ತ ವಯಸ್ಕರಾಗಿದ್ದರು. ಪಾರ್ಟಿಯನ್ನು ಅಲ್ಪಾವಧಿಯ ಬಾಡಿಗೆ ಆಸ್ತಿಯಲ್ಲಿ ನಡೆಸಲಾಗುತ್ತಿದೆ ಎಂದು ಪೀಟರ್ಸ್ ಬರ್ಗ್ ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನ ಗಾಯಗಳಿಗಾಗಿ ಸುಮಾರು 11 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ಇಬ್ಬರು ಪುರುಷರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಲಾಯನ ಮಾಡಲು ಪ್ರಯತ್ನಿಸುವಾಗ ಇನ್ನೂ ಅನೇಕರು ಗಾಯಗೊಂಡರು. ಕಟ್ಟಡದ ಕಿಟಕಿಯಿಂದ ಜಿಗಿದ ನಂತರ ಇಬ್ಬರು ವ್ಯಕ್ತಿಗಳು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದ ಒಳಗೆ ಸುಮಾರು 50 ಸುತ್ತು ಗುಂಡು ಹಾರಿಸಲಾಗಿದೆ ಮತ್ತು ಅದರ ಹೊರಗೆ ಇನ್ನೂ ಹಲವಾರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ, ರೈಫಲ್ ಗಳು ಮತ್ತು ಪಿಸ್ತೂಲ್ ಗಳ ಶೆಲ್ ಕವಚಗಳು ಪತ್ತೆಯಾಗಿವೆ ಎಂದು ಪೀಟರ್ಸ್ ಬರ್ಗ್ ಪೊಲೀಸ್ ಕಮಾಂಡರ್ ಜಾನ್ ಫಿಶರ್ ಡಬ್ಲ್ಯುತಿಳಿಸಿದ್ದಾರೆ.