ಟೋಕಿಯೊ: ಪೂರ್ವ ಜಪಾನ್ನಲ್ಲಿ ಬುಧವಾರ ರಾತ್ರಿ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಾತ್ರಿ 11:36 ಕ್ಕೆ (ಜಪಾನ್) ಭೂಕಂಪನ ಸಂಭವಿಸಿದ ಕೆಲ ಸಮಯದ ನಂತರ ಕರಾವಳಿಯ ಕೆಲವು ಭಾಗಗಳಿಗೆ ಸುನಾಮಿ ಏಳುವ ಬಗ್ಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
ರಾಜಧಾನಿ ಟೋಕಿಯೊವನ್ನು ಜರ್ಜರಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ಕರಾವಳಿಯ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಫುಕುಶಿಮಾ ಕರಾವಳಿಯ ಸಮುದ್ರದ 60 ಕಿಲೋಮೀಟರ್ ಆಳದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು.
ಸದ್ಯ, ಯಾವುದೇ ಸಾವು ನೋವಿನ ವರದಿ ಆಗಿಲ್ಲವಾದರೂ ಟೋಕಿಯೊದ 7 ಲಕ್ಷ ಸೇರಿ 20 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ವಿದ್ಯುತ್ ಸರಬರಾಜು ಸಂಸ್ಥೆ ಟೆಪ್ಕೋ ತಿಳಿಸಿದೆ.
ಫುಕುಶಿಮಾ ಅಣುಸ್ಥಾವರದ ಬಳಿಯ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿರುವುದಾಗಿಯೂ ಟೆಪ್ಕೊ ಹೇಳಿದೆ.