ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಬುಧವಾರ ಶ್ವೇತ ಭವನದಲ್ಲಿ ಮಾತನಾಡುವ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಯುದ್ಧ ಅಪರಾಧಿ ಎಂದು ಕರೆದಿರುವುದಕ್ಕೆ ರಷ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಿಡೆನ್ ಹೇಳಿಕೆ ಅಕ್ಷಮ್ಯವಾಗಿದೆ, ಅಂತಹ ಹೇಳಿಕೆಗಳನ್ನು ಕ್ಷಮಿಸುವುದಿಲ್ಲ ಎಂದು ರಷ್ಯಾ ವಕ್ತಾರ ಡಿಮಿಟ್ರಿ ಪೆಸ್ಕೋವ್ ಕಿಡಿಕಾರಿದ್ದಾರೆ.
ಉಕ್ರೇನ್ನ ಮರಿಯುಪೋಲ್ನಲ್ಲಿ ರಷ್ಯಾದ ಪಡೆಗಳು ಉಕ್ರೇನ್ ವೈದ್ಯರು ಮತ್ತು ರೋಗಿಗಳನ್ನು ಒತ್ತೆಯಾಳಾಗಿ ಇರಿಸಿರುವ ವರದಿಗಳನ್ನು ಉಲ್ಲೇಖಿಸಿ, ಬಿಡೆನ್ ಪತ್ರಿಕಾಗೋಷ್ಠಿಯಲ್ಲಿ ಪುಟಿನ್ ಯುದ್ಧಪರಾಧಗಳನ್ನು ಮಾಡುತ್ತಿದ್ದಾರೆ.
ಉಕ್ರೇನ್ ದೇಶದ ಬೆಂಬಲಕ್ಕೆ ಇಡೀ ವಿಶ್ವವು ಒಗ್ಗೂಡಿದೆ. ಪುಟಿನ್ ಭಾರೀ ಬೆಲೆ ತೆರುವಂತೆ ಮಾಡುವ ನಮ್ಮ ನಿರ್ಣಯಕ್ಕೆ ಅನೇಕ ದೇಶಗಳ ಸಹಮತ ಸಿಕ್ಕಿದೆ ಎಂದು ಹೇಳಿದ್ದರು.