ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ವಿರೋಧಿಸಿ ಅಮೆರಿಕ, ಕೆನಡಾ ರಾಷ್ಟ್ರಗಳು ರಷ್ಯಾ ಉತ್ಪಾದಿತ ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ.
ಕೆನಡಾದ ಮನಿಟೊಬ, ನ್ಯೂಫೌಂಡ್ ಲ್ಯಾಂಡ್, ಒಂಟಾರಿಯೋ ಸೇರಿ ಹಲವು ಪ್ರಾಂತ್ಯಗಳಲ್ಲಿ ರಷ್ಯಾ ಮೂಲದ ಮದ್ಯಗಳ ಮೇಲೆ ನಿರ್ಬಂಧ ಹೇರಲಾಗಿದೆ. ಕೆನಡಾದಲ್ಲಿ ರಷ್ಯಾ ಮೂಲದ ಸಂಸ್ಥೆಗಳ ವೋಡ್ಕಾಗೂ ನಿಷೇಧ ಹೇರಲಾಗಿದೆ.
ಇನ್ನು ಅಮೆರಿಕದ ನ್ಯೂಹ್ಯಾಂಪ್ ಶೈರ್ ರಾಜ್ಯದ ಗವರ್ನರ್ ಕ್ರಿಸ್ ಸುನುನು ಮಾಹಿತಿ ನೀಡಿದ್ದು, ಸಾರ್ಕಾರದ ವೈನ್ ಸ್ಟೋರ್ ಹಾಗೂ ಇತರ ಮದ್ಯ ಮದ್ಯ ಮಾರಾಟ ಕೇಂದ್ರಗಳಲ್ಲಿ ರಷ್ಯನ್ ಬ್ರ್ಯಾಂಡ್ ಮದ್ಯ ಮಾರಾಟ ಮಾಡಲು ಅವಕಾಶ ಇಲ್ಲ ಎಂದು ಘೋಷಿಸಿದ್ದಾರೆ.