News Karnataka Kannada
Wednesday, May 01 2024
ವಿದೇಶ

ಪಾಕ್‌ ಸೇನಾ ಮುಖ್ಯಸ್ಥನ ವಿರುದ್ಧ ಟ್ವೀಟ್‌:ಇಮ್ರಾನ್‌ ಖಾನ್‌ ಪಕ್ಷದ 8 ಕಾರ್ಯಕರ್ತರ ಬಂಧನ

Arrest
Photo Credit :

ಲಾಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ‘ಪಾಕಿಸ್ತಾನ್‌ ತೆಹ್ರೀಕ್ ಎ ಇನ್ಸಾಫ್‌ ‘ (ಪಿಟಿಐ) ಪಕ್ಷದ 8 ಮಂದಿ ಸಾಮಾಜಿಕ ಮಾಧ್ಯಮ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿದ್ದ 8 ಮಂದಿ ಪಿಟಿಐ ಕಾರ್ಯಕರ್ತರನ್ನು ಪಾಕಿಸ್ತಾನದ ಫೆಡರಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿ (ಎಫ್‌ಐಎ) ಮಂಗಳವಾರ ಬಂಧಿಸಿದೆ.

ಅವರ ವಿರುದ್ಧ ಪಾಕ್‌ ಸೇನಾ ಮುಖ್ಯಸ್ಥ ಜ.ಖಮರ್‌ ಜಾವೇದ್‌ ಬಾಜ್ವಾ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ನಿಂದನೆ ಹಾಗೂ ಅಪಪ್ರಚಾರ ನಡೆಸಿದ ಆರೋಪ ಹೊರಿಸಲಾಗಿದೆ.

ಮಾರ್ಚ್‌ 8ರಂದು ಇಮ್ರಾನ್‌ ಖಾನ್‌ ತಮ್ಮ ಸರ್ಕಾರ ವಿರುದ್ಧದ ‘ಅವಿಶ್ವಾಸ ನಿರ್ಣಯ’ದಲ್ಲಿ ಪರಾಭವಗೊಂಡು, ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳ್ಳುತ್ತಿದ್ದಂತೆ ಟ್ವಿಟರ್‌ನಲ್ಲಿ ಜ. ಬಾಜ್ವಾ ವಿರುದ್ಧದ ಆಪಾದನೆಗಳನ್ನು ಒಳಗೊಂಡ ಅಭಿಯಾನ ಟ್ರೆಂಡಿಂಗ್‌ನಲ್ಲಿತ್ತು.

‘ಸೇನಾ ಮುಖ್ಯಸ್ಥ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧದ ಸಾವಿರಾರು ಟ್ವೀಟ್‌ಗಳ ಮೂಲಕ ಅಪಪ್ರಚಾರದಲ್ಲಿ ಭಾಗಿಯಾಗಿದ್ದ 50 ಮಂದಿ ಶಂಕಿತರ ಪಟ್ಟಿಯನ್ನು ಗುಪ್ತಚರ ಸಂಸ್ಥೆಗಳು ನೀಡಿದ್ದವು. ಈ ಪೈಕಿ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಫ್‌ಐಎ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು