News Karnataka Kannada
Monday, April 29 2024
ವಿದೇಶ

ಕಮಲಾ ಹ್ಯಾರಿಸ್ ಹಾಗೂ ಅಧ್ಯಕ್ಷ ಜೋ ಬೈಡನ್ ನಡುವೆ ಭಿನ್ನಾಭಿಪ್ರಾಯ

Joe Biden 20082021
Photo Credit :

ವಾಷಿಂಗ್ಟನ್: ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂವಹನ ನಿರ್ದೇಶಕಿ ಆಶೆಲಿ ಎಟಿಯೆನ್ ಅವರು ಡಿಸೆಂಬರ್‌ನಲ್ಲಿ ಬೈಡನ್ ಆಡಳಿತದಲ್ಲಿನ ತಮ್ಮ ಹುದ್ದೆ ತ್ಯಜಿಸಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಎಟಿಯೆನ್‌ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ತಂಡದ ಪ್ರಮುಖ ಸದಸ್ಯರಾಗಿದ್ದು, ಅಧ್ಯಕ್ಷ ಜೋ ಬೈಡನ್ ಆಡಳಿತದ ಗುರಿಗಳನ್ನು ಮುನ್ನಡೆಸಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ, ಆದರೆ, ಇತರ ಅವಕಾಶಗಳ ಅನುಸರಿಸಿ ಅವರು ಡಿಸೆಂಬರ್‌ನಲ್ಲಿ ಕಚೇರಿಯನ್ನು ತೊರೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ. ಹ್ಯಾರಿಸ್ ಹಾಗೂ ಅಧ್ಯಕ್ಷ ಜೋ ಬೈಡನ್ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳ ವರದಿಗಳ ನಡುವೆ ಈ ಸುದ್ದಿ ಬಂದಿದೆ.

ಶ್ವೇತಭವನದ ವಕ್ತಾರ ಜೆನ್ ಪ್ಸಾಕಿ ಭಾನುವಾರ ವರದಿಗಳನ್ನು ನಿರಾಕರಿಸಿದ್ದರು. ಹ್ಯಾರಿಸ್ ಅವರು ಪ್ರಮುಖ ಪಾಲುದಾರೆ, ದಿಟ್ಟ ನಾಯಕಿ ಎಂದು ಹೇಳಿದ್ದರು. 2024 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಯೋಜನೆಗಳ ಬಗ್ಗೆ ತಾವು ಪ್ರಸ್ತುತ ಬೈಡನ್ ಅವರೊಂದಿಗೆ ಚರ್ಚಿಸುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಹ್ಯಾರಿಸ್ ಹೇಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು