News Karnataka Kannada
Sunday, April 28 2024
ವಿದೇಶ

ಪಾಕಿಸ್ತಾನ: 18 ವರ್ಷದ ಹಿಂದೂ ಯುವತಿ ಅಪಹರಣದ ವೇಳೆ ಗುಂಡಿಟ್ಟು ಹತ್ಯೆ- ವರದಿ

Kashmiri Pandit shot at by terrorists in J&K's Shopian
Photo Credit : IANS

ಕರಾಚಿ : 18 ವರ್ಷದ ಹಿಂದೂ ಯುವತಿಯನ್ನು ಅಪಹರಣ ಮಾಡಲು ಯತ್ನಿಸಿದ ವೇಳೆ ವಿರೋಧ ವ್ಯಕ್ತಪಡಿಸಿದಾಗ ಗುಂಡು ಹೊಡೆದು ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಯುವತಿ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಲು ಯತ್ನಿಸಿದಾಗ, ಆಕೆ ಪ್ರತಿರೋಧ ಒಡ್ಡಿದಾಗ ಗುಂಡು ಹಾರಿಸಿರುವುದಾಗಿ ದ ಪ್ರೈಡೆ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಸಿಂಧ್ ಪ್ರಾಂತ್ಯದಲ್ಲಿ ಪ್ರತಿವರ್ಷ ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದೂ, ಸಿಖ್ ಮಹಿಳೆಯರನ್ನು ಉಗ್ರಗಾಮಿಗಳು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯ ಬಲವಂತದ ವಿವಾಹ ಮತ್ತು ಮತಾಂತರದ ಸಮಸ್ಯೆಯನ್ನು ದೀರ್ಘಕಾಲದಿಂದ ಎದುರಿಸುತ್ತಿದೆ. 2013ರಿಂದ 2019ರ ನಡುವೆ 156 ಬಲವಂತದ ಮತಾಂತರ ಪ್ರಕರಣ ನಡೆದಿದೆ ಎಂದು ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು