ಇಸ್ಲಾಮಾಬಾದ್, ನ 05 : ಹಣದುಬ್ಬರ ಎದುರಿಸುತ್ತಿರುವ ಪಾಕಿಸ್ತಾನ ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ದಾಖಲೆ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಇಮ್ರಾನ್ ಖಾನ್ ತೈಲ ಬೆಲೆ ಏರಿಕೆ ಮಾಡಿದ್ದು, ಪೆಟ್ರೋಲಿಯಂ ದರವನ್ನು ಪಾಕಿಸ್ತಾನಿ ರುಪಿಯಲ್ಲಿ ಪ್ರತಿ ಲೀಟರ್ಗೆ 8.14ರಷ್ಟು ಏರಿಕೆ ಮಾಡಲಾಗಿದೆ. ತಕ್ಷಣದಿಂದಲೇ ಈ ದರ ಜಾರಿಯಾಗುವಂತೆ ಸೂಚಿಸಲಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇದೀಗ ಲೀಟರ್ಗೆ 110 ಪಿಕೆಆರ್ನಷ್ಟಿದೆ. ಒಂದೇ ಬಾರಿಗೆ ಇಷ್ಟೊಂದು ದರ ಹೆಚ್ಚಳ ಮಾಡಿದ್ದು, ಪಾಕಿಸ್ತಾನದ ಇತಿಹಾಸದಲ್ಲೇ ಇದು ಮೊದಲಾಗಿದೆ. ಪಾಕಿಸ್ತಾನದ ಹಣಕಾಸು ಸಚಿವಾಲಯವು ಶುಕ್ರವಾರ ಬೆಳಗ್ಗೆ ಈ ಸೂಚನೆ ಹೊರಡಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಯೋಜನೆಯಲ್ಲಿ ಈ ದರ ಏರಿಕೆ ಮಾಡಲಾಗಿದೆ ಎಂದು ಡಾನ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ 8.03 ಪಿಕೆಆರ್ ಹೆಚ್ಚಿಸಿದ್ದರೆ , ಹೈಸ್ಪೀಡ್ ಡೀಸೆಲ್ ಬೆಲೆಯನ್ನು 8.14 ಪಿಕೆಆರ್ ಏರಿಕೆ ಮಾಡಲಾಗಿದೆ. ಸೀಮೆ ಎಣ್ಣೆ ಬೆಲೆಯನ್ನು 6.27ಪಿಕೆಆರ್ನಷ್ಟು ಹೆಚ್ಚಿಸಲಾಗಿದೆ. ಲಘು ಡೀಸೆಲ್ ಬೆಲೆಯನ್ನು ಲೀಟರ್ಗೆ 5.72 ಪಿಕೆಆರ್ನಷ್ಟು ಹೆಚ್ಚಳ ಮಾಡಲಾಗಿದೆ.