ನವದೆಹಲಿ : ಕೇಂದ್ರ ಸರ್ಕಾರ ದೇಶದ ಜನತೆಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು, ಪೆಟ್ರೋಲ್, ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿದೆ. ಇಂದು ಮಧ್ಯರಾತ್ರಿಯಿಂದಲೇ ನೂತನ ಪೆಟ್ರೋಲ್, ಡೀಸೆಲ್ ದರ ಜಾರಿಗೆ ಬರಲಿದ್ದು, ಪೆಟ್ರೋಲ್ ಮೇಲೆ 5 ರೂ ಹಾಗೂ ಡೀಸೆಲ್ ಮೇಲೆ 10 ರೂ ಅಬಕಾರಿ ಸುಂಕ ಕಡಿತಗೊಳಿಸಿದೆ. ಈ ಮೂಲಕ ದೇಶದ ಜನತೆಗೆ ಮೋದಿ ಸರ್ಕಾರ ದೀಪಾವಳಿ ಹಬ್ಬಕ್ಕೆ ಭರ್ಜರಿ ಕೊಡುಗೆ ನೀಡಿದೆ.
ಕೇಂದ್ರ ಸರ್ಕಾರ ಹಬ್ಬಕ್ಕೂ ಮುನ್ನ ದಿನ ದೇಶದ ಜನತೆಗೆ ಗಿಫ್ಟ್ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತವನ್ನ ಘೋಷಿಸಿದೆ. ಹೌದು, ಈ ಕುರಿತು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದ್ದು, ‘ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತವನ್ನ ಘೋಷಿಸಿದೆ. ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನ ಕ್ರಮವಾಗಿ 5 ಮತ್ತು 10 ರೂ.ಗಳಷ್ಟು ಕಡಿಮೆ ಮಾಡಲಾಗುವುದು’ ಎಂದು ಘೋಷಿಸಿದೆ.