ವಾಷಿಂಗ್ಟನ್ : ಅಮೆರಿಕದ ಯೂನಿವರ್ಸಿಟಿಯೊಂದರಲ್ಲಿ ಕೆಲವು ದಿನಗಳ ಹಿಂದೆ ಗುಂಡಿನ ದಾಳಿ ಮರೆಯಾಗುವ ಮುನ್ನವೇ ಅಮೆರಿಕದ ಟಕೋಮಾದಲ್ಲಿ ಗುಂಡಿನ ದಾಳಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಈ ದಾಳಿ ನಡೆದಿದ್ದು, , ಗುಂಡಿನ ದಾಳಿಯಲ್ಲಿ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತನೂ ಕೂಡ ಸಾವನ್ನಪ್ಪಿದ್ದಾನೆ ಎಂದು ಟಕೋಮಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಟಕೋಮಾ ನಗರದ ಈಸ್ಟ್ ಸೈಡ್ ಸಮೀಪದ ಎವೆರೆಟ್ ಸ್ಟ್ರೀಟ್ ನ 4200 ಬ್ಲಾಕ್ ನಲ್ಲಿ ಈ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.