ವುಹಾನ್ : ವುಹಾನ್ ಲ್ಲಿ ವರ್ಷದ ಬಳಿಕ ಮತ್ತೆ ಕೋವಿಡ್ ಸೋಂಕು ಸ್ಫೋಟವಾಗಿದ್ದು, ಇದೇ ಕಾರಣಕ್ಕೆ ಚೀನಾ ಸರ್ಕಾರ ವುಹಾನ್ ನಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ವುಹಾನ್ ನ ಏಳು ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿದ್ದು, ಇನ್ನೂ ಸಾಕಷ್ಟು ಮಂದಿಯಲ್ಲಿ ಸೋಂಕು ಇರುವ ಕುರಿತು ಶಂಕೆ ವ್ಯಕ್ತಲಾಗಿದೆ. ಹೀಗಾಗಿ ಚೀನಾ ಸರ್ಕಾರ ವುಹಾನ್ ನಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದೆ.
ಚೀನಾದ ವುಹಾನ್ ನಗರದ ಜನಸಂಖ್ಯೆ 1 ಕೋಟಿಗೂ ಹೆಚ್ಚಿದ್ದು, ಶೀಘ್ರದಲ್ಲೇ ಎಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಚೀನಾದ ನಾನ್ಜಿಂಗ್ನ ವಿಮಾನ ನಿಲ್ದಾಣ ಕ್ಲೀನರ್ಗಳಿಗೆ ಸೋಂಕು ತಗುಲಿದೆ. ಕೊರೊನಾದ ಡೆಲ್ಟಾ ರೂಪಾಂತರವು ಅನೇಕ ನಗರಗಳಿಗೆ ಹರಡುತ್ತಿದೆ.