News Karnataka Kannada
Saturday, May 04 2024
ವಿದೇಶ

ಕ್ಯಾನ್ಸರ್​ನಿಂದ ಖ್ಯಾತ ಸಿಂಗರ್ ಟಾಮ್​ ನಿಧನ; ಸಂತಾಪ ಸೂಚಿಸಿದ ಯುವರಾಜ್​ ಸಿಂಗ್

Yuvrajsingh
Photo Credit : Twitter

ಟಾಮ್​ಗೆ ಮಿದುಳಿನಲ್ಲಿ ಟ್ಯೂಮರ್ ಇರುವ ವಿಚಾರ 2020ರಲ್ಲಿ ತಿಳಿದಿತ್ತು. ಈ ವಿಚಾರವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಕ್ಯಾನ್ಸರ್​ ಪತ್ತೆ ಆದ ನಂತರದಲ್ಲಿ ಅವರು ಸಾಕಷ್ಟು ಕುಗ್ಗಿದ್ದರು. ಬ್ರಿಟಿಷ್-ಐರಿಶ್ ಬ್ಯಾಂಡ್​ ‘ದಿ ವಾಂಟೆಡ್​’ನ ಸದಸ್ಯನಾಗಿದ್ದ ಖ್ಯಾತ ಗಾಯಕ ಟಾಮ್​ ಪಾರ್ಕರ್ ​ ಅವರು ಮಿದುಳು ಕ್ಯಾನ್ಸರ್ ​ನಿಂದ ನಿಧನ ಹೊಂದಿದ್ದಾರೆ.

ಅವರಿಗೆ ಕೇವಲ 33 ವರ್ಷ ವಯಸ್ಸಾಗಿತ್ತು. ಟಾಮ್​ಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದರು. ಅವರು ನಿಧನ ಹೊಂದಿರುವ ವಿಚಾರವನ್ನು ‘ದಿ ವಾಂಟೆಡ್​’ ಬ್ಯಾಂಡ್ ಘೋಷಣೆ ಮಾಡಿದ್ದು, ಸಾಕಷ್ಟು ದುಃಖ ವ್ಯಕ್ತಪಡಿಸಿದೆ. ಅವರನ್ನು ಕಳೆದುಕೊಂಡಿದ್ದಕ್ಕೆ ಅಭಿಮಾನಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಟಾಮ್ ಪಾರ್ಕರ್​ ನಿಧನಕ್ಕೆ ವಿಶ್ವದ ನಾನಾ ಕಡೆಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಟೀಂ ಇಂಡಿಯಾ ಮಾಜಿ ಆಟಗಾರ​ ಯುವರಾಜ್​ ಸಿಂಗ್  ಕೂಡ ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ.

ಟಾಮ್​ಗೆ ಮಿದುಳಿನಲ್ಲಿ ಟ್ಯೂಮರ್ ಇರುವ ವಿಚಾರ 2020ರಲ್ಲಿ ತಿಳಿದಿತ್ತು. ಈ ವಿಚಾರವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಕ್ಯಾನ್ಸರ್​ ಪತ್ತೆ ಆದ ನಂತರದಲ್ಲಿ ಅವರು ಸಾಕಷ್ಟು ಕುಗ್ಗಿದ್ದರು. ವಿಶ್ವದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಕೆಮೋಥೆರಪಿಗೆ ಒಳಗಾಗಿದ್ದರು. ಆದರೆ, ಕ್ಯಾನ್ಸರ್​ನ ಗುಣಮಾಡಲು ಸಾಧ್ಯವಾಗಲೇ ಇಲ್ಲ. ‘ನಮ್ಮ ಹೃದಯ ಒಡೆದು ಹೋಗಿದೆ. ಟಾಮ್ ನನ್ನ ಜಗತ್ತೇ ಆಗಿದ್ದರು. ಅವರಿಲ್ಲದೆ ನಾವು ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಟಾಮ್ ಪತ್ನಿ ಕೆಲ್ಸಿ ಹಾರ್ಡ್ವಿಕ್ ದುಃಖ ಹೊರಹಾಕಿದ್ದಾರೆ.

ಕೆಲ್ಸಿ ಹಾಗೂ ಟಾಮ್​ 2018ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳು. ಕುಟುಂಬದವರು ಹಾಗೂ ಬ್ಯಾಂಡ್​ನ ಸದಸ್ಯರು ಸಮೀಪದಲ್ಲಿರುವಾಗಲೇ ಟಾಮ್​ ಕೊನೆಯುಸಿರು ಎಳೆದಿದ್ದಾರೆ. ಅವರ ಫೋಟೋಗಳನನ್ನು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು