News Karnataka Kannada
Wednesday, May 01 2024
ವಿದೇಶ

ಕರೋನದಿಂದ ಪಾರಾಗಲು ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಪೋಷಕರಿಗೆ ಇಸ್ರೇಲ್ ಪ್ರಧಾನಿ ಕರೆ

Isrel Pm
Photo Credit :

ಜೆರುಸಲೆಮ, ಡಿ 20 :  ಕರೋನ ದಿಂದ ಪಾರಾಗಲು ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಕರೆ ನೀಡಿದರು. ಹೊಸ ಓಮಿಕ್ರಾನ್ ರೂಪಾಂತರವು ಹರಡುವ ಲಕ್ಷಣಗಳನ್ನು ತೋರಿಸಿರುವುದರಿಂದ, ಬ್ರಿಟನ್ ಪ್ರಯಾಣ ನಿಷೇಧವನ್ನು ವಿಸ್ತರಿಸಲು ಅಕಾರಿಗಳು ತಯಾರಿ ನಡೆಸುತ್ತಿರುವಾಗ ಇಸ್ರೇಲ್ ಪ್ರಧಾನಿ ದೂರದರ್ಶನದ ಭಾಷಣದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಎಚ್ಚರ ವಹಿಸುವಂತೆ ಒತ್ತಿ ಹೇಳಿದ್ದಾರೆ.

ಹೊಸ ರೂಪಾಂತರದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ವಿದೇಶಿಯರನ್ನು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಸುª ಕ್ರಮಗಳಿಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ಇಸ್ರೇಲ್‍ನಲ್ಲಿ ಕಳೆದ ತಿಂಗಳಿನಿಂದ 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆಗಳನ್ನು ನೀಡಲು ಪ್ರಾರಂಭಿಸಿತು, ಮಕ್ಕಳ ಲಸಿಕೆ ಸುರಕ್ಷಿತವಾಗಿದೆ ಯಾವುದೆ ಅನುಮಾನ ಪಡೆದೆ ಲಸಿಕೆ ಕೊಡಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಬೆನೆಟ್ ಹೇಳಿದರು.

ನಿಮ್ಮ ಮಕ್ಕಳನ್ನು ಮುಂಬರುವ ಓಮಿಕ್ರಾನ್ ದುರ್ಬಲಗೊಳಿಸಲು ಬಿಡಬೇಡಿ ಎಂದು ಅವರು ಹೇಳಿದರು. ಮುಂಬರುವ ವಾರಗಳಲ್ಲಿ ಪ್ರಕರಣಗಳ ಹೆಚ್ಚಳವನ್ನು ಊಹಿಸಿರುವ ಅವರು, ಸರ್ಕಾರವು ಹೊಸ ಸುರಕ್ಷತಾ ಶಿಫಾರಸುಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಇಸ್ರೇಲ್ ನ 9.3 ಮಿಲಿಯನ್ ಜನರಲ್ಲಿ 4.1 ಮಿಲಿಯನ್ ಗಿಂತಲೂ ಹೆಚ್ಚು ಜನರು ಮೂರನೇ ಡೋಸ್ ಫಿರ್ಜರ್ /ಬಯೋಎನ್ಟೆಕ್ ಲಸಿಕೆಯನ್ನು ಪಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು